
ಮದುವೆ ಸಮಾರಂಭಗಳ ಬಗ್ಗೆ ನಮ್ಮ ಮನಸ್ಸುಗಳಲ್ಲಿ ಭಾರೀ ಕಲ್ಪನೆಗಳಿರುತ್ತವೆ. ಭಾರತದಲ್ಲಿ ಮದುವೆಗಳೆಂದರೆ ಅದ್ಧೂರಿ ಸಮಾರಂಭಗಳೆಂದೇ ಅರ್ಥ. ಆದರೆ ಇಂಥ ಭಾರೀ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ನಮ್ಮೆಲ್ಲರಿಗೂ ಭಾರೀ ದಣಿವೂ ಆವರಿಸಬಲ್ಲದು ಎಂಬುದನ್ನು ನಾವು ಮರೆತೇ ಬಿಟ್ಟಿರುತ್ತೇವೆ.
ಇಂಥದ್ದೇ ಉದಾಹರಣೆಯೊಂದರಲ್ಲಿ, ಮದುವೆಯ ಎಲ್ಲಾ ಶಾಸ್ತ್ರಗಳು ಹಾಗೂ ಕಾರ್ಯಕ್ರಮಗಳನ್ನು ಮುಗಿಸುತ್ತಾ ದಣಿವಾಗಿಬಿಟ್ಟಿದ್ದ ಮದುಮಗಳೊಬ್ಬಳು ವಿಶ್ರಾಂತಿಗಾಗಿ ಹಾತೊರೆಯುತ್ತಾ, ನಿದ್ರೆ ಮಾಡಲು ಬಿಟ್ಟರೆ ಸಾಕೆಂಬ ಮೂಡ್ನಲ್ಲಿರುವ ವಿಡಿಯೋವೊಂದು ವೈರಲ್ ಆಗಿದೆ.
ಆನ್ಲೈನ್ ಕ್ಲಾಸ್ ನಲ್ಲಿ ಅಚಾತುರ್ಯ: ಅಶ್ಲೀಲ ವೀಡಿಯೋ ಪ್ರಸಾರ; ಮಕ್ಕಳು, ಶಿಕ್ಷಕರಿಗೆ ಮುಜುಗರ
ಹರ್ಷಿತಾ ಸೇಥಿ ಹೆಸರಿನ ನಟ್ಟಿಗರೊಬ್ಬರು ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪಾರುಲ್ ಸೇಥಿ ಹಸರಿನ ಈ ಮದುಮಗಳು, ’ಫೇರಾ’ ಸಮಾರಂಭದ ಆರಂಭವಾಗಲೆಂದು ಕಾಯುತ್ತಿದ್ದಾರೆ. ಈ ವೇಳೆಯಲ್ಲಿ ನಿನ್ನ ಮನಸ್ಸಿನಲ್ಲಿ ಏನು ಆಲೋಚನೆ ಬರುತ್ತಿದೆ ಎಂದು ಪಾರುಲ್ರನ್ನು ಹರ್ಷಿತಾ ಕೇಳಿದ್ದು, ಅದಕ್ಕೆ ಅಳುವಂತೆ ಅಣಕ ಮಾಡಿದ ಪಾರುಲ್, ಸದ್ಯ ರಾತ್ರಿಯ ಸೂಟ್ ತನಗೆ ಸಿಕ್ಕರೆ ಸಾಕೆಂದು ಹೇಳಿಕೊಂಡಿದ್ದಾರೆ.
ನಿರೀಕ್ಷೆಯಂತೆಯೇ ಈ ವಿಡಿಯೋಗೆ ನೆಟ್ಟಿಗರಿಂದ ಥರಾವರಿ ಕಾಮೆಂಟ್ಗಳ ಸುರಿಮಳೆಯೇ ಬಂದಿದ್ದು, ಇಲ್ಲಸಲ್ಲದ ಸಮಾರಂಭಗಳಿಂದ ಮದುವೆ ಕಾರ್ಯಕ್ರಮವನ್ನು ವಿಸ್ತರಿಸುವುದರಿಂದ ಏನೆಲ್ಲಾ ಖುಷಿಗಳಿವೆಯೋ ಹಾಗೇ ಏನೆಲ್ಲಾ ಶ್ರಮ ಹಿಡಿಯುತ್ತದೋ ಎಂಬ ಕುರಿತು ಚರ್ಚೆಗಳು ನಡೆದಿವೆ.
https://youtu.be/exvRAE2btCY