ಮದುವೆ ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದೇ ನಡೆಯಲಿ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಭಾರತೀಯ ಸಂಪ್ರದಾಯವು ಸ್ವಲ್ಪ ಜೋರಾಗಿಯೇ ಇದ್ದ ಕಾರಣದಿಂದ ಭಾರತೀಯ ಮದುವೆಗಳಲ್ಲಿ ಅದರಲ್ಲಿಯೂ ಹೆಣ್ಣಿನ ಮನೆಯವರು ಮದುವೆ ಸರಿಯಾಗಿ ನೆರವೇರಬೇಕೆಂದು ಎಲ್ಲಾ ದೇವರಿಗೂ ಹರಕೆ ಹೊತ್ತುಕೊಳ್ಳುವುದು ಇದೆ.
ಮದುವೆಗೆ ಬಂದ ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ನಿಜ. ಆದರೆ ಆ ಅತಿಥಿಯೇ ಎಡವಟ್ಟು ಮಾಡಿದರೆ? ಆಗಲೂ ಅವರನ್ನು ಬೈಯಬಾರದು ಎಂದು ಸಂಪ್ರದಾಯ ಹೇಳುತ್ತದೆ.
ವಿದೇಶಗಳಲ್ಲಿ ಈ ಸಂಪ್ರದಾಯ ಇದೆಯೋ ಇಲ್ಲವೋ ತಿಳಿಯದು. ಆದರೆ ಹೀಗೆ ಎಡವಟ್ಟು ಮಾಡಲು ಹೋದ ಅತಿಥಿಯೊಬ್ಬನನ್ನು ವರ ಮಹಾಶಯ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಕೆಲವು ದೇಶಗಳಲ್ಲಿ ಮದುವೆ, ಹುಟ್ಟುಹಬ್ಬ ಯಾವುದೇ ಸಂಪ್ರದಾಯವಿದ್ದರೂ ಅದರಲ್ಲಿ ಕೇಕ್ ಕತ್ತರಿಸುವುದೇ ಮಹತ್ವದ ಪಾತ್ರ ವಹಿಸುತ್ತದೆ. ಮದುವೆಯಾಗಿದ್ದರೆ ಕೇಕ್ ಕತ್ತರಿಸಿ ವಧು ತನ್ನ ವರನಿಗೂ, ವರ ತನ್ನ ವಧುವಿಗೂ ಅದನ್ನು ತಿನ್ನಿಸುವುದು ನಂತರ ಉಂಗುರ ಬದಲಾಯಿಸಿಕೊಳ್ಳುವುದೇ ಇಲ್ಲಿ ಮಹತ್ವದ್ದು. ಅಂಥ ಮಹತ್ವದ ಕಾರ್ಯಕ್ಕೇ ಅಡ್ಡಿಪಡಿಸಿದರೆ ಹೇಗಿರುತ್ತದೆ? ಈ ವಿಡಿಯೋದಲ್ಲಿ ನೋಡಿದರೆ ಇಲ್ಲಿ ವರ ಸಿಟ್ಟುಗೊಳ್ಳಲೂ ಅದೇ ಕಾರಣ.
ಇನ್ನೇನು ವರ ಕೇಕ್ ಕತ್ತರಿಸಿ ವಧುವಿನ ಬಾಯಿಗೆ ಇಡಬೇಕು ಎನ್ನುವಷ್ಟರಲ್ಲಿ ಫುಲ್ ಟೈಟ್ ಆಗಿ ಬಂದ ವ್ಯಕ್ತಿಯೊಬ್ಬ ಕೇಕ್ ಅನ್ನು ನಾಶಪಡಿಸಿದ್ದಾನೆ. ವಧು-ವರರ ಸಮೀಪ ಹೋದ ವ್ಯಕ್ತಿ ಕೇಕ್ ಅನ್ನು ಕೈಯಿಂದ ಹಿಡಿದು ವರ ಮತ್ತು ವಧುವಿನ ಮುಖದ ಮೇಲೆ ಹಾಕಲು ಪ್ರಯತ್ನಿಸುತ್ತಾನೆ. ಆಘಾತಗೊಂಡ ವಧು ಹಿಂದಕ್ಕೆ ಸರಿಯುತ್ತಾಳೆ.
ಆ ಅತಿಥಿಯ ಕ್ರಮಕ್ಕೆ ಸಿಟ್ಟಿಗೆದ್ದ ವರ ಮಹಾಶಯ ಅತಿಥಿಯ ಕಪಾಳಕ್ಕೆ ಹೊಡೆಯುತ್ತಾನೆ. ಕೇಕ್ ನಾಶಪಡಿಸಿದ ಆ ವ್ಯಕ್ತಿ ಕೊನೆಗೆ ವರನನ್ನು ಅಪ್ಪಿಕೊಳ್ಳಲು ಮುಂದಾದಾಗ ಸಿಟ್ಟಿಗೆದ್ದ ವರ ಕಪಾಳಕ್ಕೆ ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು.
https://twitter.com/spurked/status/1590603405814554625?ref_src=twsrc%5Etfw%7Ctwcamp%5Etweetembed%7Ctwterm%5E1590603405814554625%7Ctwgr%5E68893b74c74a4bb0573a9d208059b7ffabc8a342%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-tipsy-guest-ruins-wedding-cake-groom-punches-him-in-the-face-6370669.html