alex Certify ಕುಕ್ಕೀಸ್​ ಅಂಚು ವಿಭಿನ್ನವಾಗಿರುವುದೇಕೆ ಗೊತ್ತಾ ? ಹಿನ್ನಲೆ ಬಿಚ್ಚಿಟ್ಟಿದ್ದಾಳೆ ಟಿಕ್‌ ಟಾಕ್‌ ಸ್ಟಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಕ್ಕೀಸ್​ ಅಂಚು ವಿಭಿನ್ನವಾಗಿರುವುದೇಕೆ ಗೊತ್ತಾ ? ಹಿನ್ನಲೆ ಬಿಚ್ಚಿಟ್ಟಿದ್ದಾಳೆ ಟಿಕ್‌ ಟಾಕ್‌ ಸ್ಟಾರ್

ನಾವು ದಿನನಿತ್ಯ ನೋಡುವ ಅನೇಕ ವಿಷಯಗಳ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಎಲ್ಲಾ ಪೆನ್ನುಗಳ ಕ್ಯಾಪ್​ಗಳಲ್ಲಿ ಸಣ್ಣ ರಂಧ್ರಗಳು ಏಕೆ ಇವೆ‌ ? ಉಣ್ಣೆಯ ಟೋಪಿಗಳ ಮೇಲೆ ಚಿಕ್ಕದೊಂದು ಗುಂಡಿನಾಕಾರ ಏಕೆ ಇರುತ್ತದೆ….. ಹೀಗೆ ಚಿಕ್ಕಚಿಕ್ಕ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂಥದ್ದೇ ಒಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಕುತೂಹಲ ಕೆರಳಿಸಿದೆ.

ಅದೇನೆಂದರೆ, ಹೆಚ್ಚಿನ ಉಪ್ಪುಸಹಿತ ಬಿಸ್ಕತ್ತುಗಳು, ಕುಕೀಸ್​ಗಳು ಅಥವಾ ಕ್ರ್ಯಾಕರ್‌ಗಳು ಕೆಲವು ಸ್ವರೂಪದ ಅಂಚುಗಳನ್ನು ಹೊಂದಿರುವುದನ್ನು ನೀವು ಗಮನಿಸಿರಬೇಕು. ಅದ್ಯಾಕೆ ಆ ರೀತಿ ಅಂಚುಗಳನ್ನು ಇಡಲಾಗುತ್ತದೆ ಎಂಬ ಬಗ್ಗೆ ಎಂದಾದರೂ ಊಹಿಸಿದ್ದೀರಾ? ಆದರೆ ಇಲ್ಲೊಬ್ಬ ಟಿಕ್​ಟಾಕ್​ ತಾರೆ ಅದಕ್ಕೆ ಉತ್ತರ ಕಂಡುಹಿಡಿದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋ ಶೇರಿಂಗ್​ ಪ್ಲಾಟ್‌ಫಾರ್ಮ್‌ನಲ್ಲಿ ‘ಥೆರಿಟ್ಜ್‌ಕ್ರಾಕರ್ಸ್ ಆಫೀಷಿಯಲ್’ ಹೆಸರಿನ ಖಾತೆಯಲ್ಲಿ ಈ ತಾರೆ ಬಿಸ್ಕತ್ತುಗಳ ಅಂಚುಗಳ ರಹಸ್ಯವನ್ನು ವರ್ಷದ ಹಿಂದೆ ಬಹಿರಂಗಪಡಿಸಿದ್ದಾಳೆ. ಅದೇನೆಂದರೆ, ಬಿಸ್ಕತ್ತುಗಳೊಂದಿಗೆ ಚೀಸ್ ತಿನ್ನುವ ಆಸೆಯಾದಾಗ, ಆ ಚೀಸ್​ಗಳನ್ನು ತುಂಡು ಮಾಡುವ ಸಲುವಾಗಿ ಬಿಸ್ಕತ್ತು, ಕುಕ್ಕೀಸ್​ ಅಥವಾ ಕ್ರ್ಯಾಕರ್ಸ್​ಗಳಿಗೆ ಅಂಚುಗಳನ್ನು ಇಡಲಾಗುತ್ತದೆ, ಹೀಗೆ ಮಾಡಿದರೆ ಚೀಸ್​ಗಳನ್ನು ತುಂಡು ಮಾಡಲು ಸುಲಭವಾಗುತ್ತದೆ ಎನ್ನುವುದು ಈಕೆಯ ಅನಿಸಿಕೆ.

ಈಕೆ ತಮಾಷೆಯಾಗಿ ಹೇಳಿದ್ದರೂ, ವಿಡಿಯೋ 3.2 ಮಿಲಿಯನ್​ ವೀಕ್ಷಣೆ ಕಂಡಿದ್ದು, 50 ಸಾವಿರಕ್ಕೂ ಅಧಿಕ ಮಂದಿ ಇದಕ್ಕೆ ಲೈಕ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...