ಸ್ಕೂಬಾ ಡೈವಿಂಗ್ ಎಂದರೆ ಧೈರ್ಯ ಅಷ್ಟಿಷ್ಟು ಸಾಕಾಗುವುದಿಲ್ಲ. ಎಷ್ಟೋ ವೇಳೆ ಸಮುದ್ರಾದಳಲ್ಲಿನ ಭಯಾನಕ ಜಲಚರಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ಸ್ಕೂಬಾ ಡೈವರ್ ಒಬ್ಬನ ಮೇಲೆ ಭಯಾನಕ ಶಾರ್ಕ್ ದಾಳಿ ಮಾಡಿರುವ ದೃಶ್ಯ ಸಮುದ್ರದಾಳದಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಈ ಶಾರ್ಕ್ ಇಡೀ ಕ್ಯಾಮೆರಾವನ್ನು ನುಂಗಿ ನಂತರ ಅದನ್ನು ಉಗುಳಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸ್ಕೂಬಾ ಡೈವರ್ನ ನೀರೊಳಗಿನ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ.
ಶಾರ್ಕ್, ಕ್ಯಾಮೆರಾವನ್ನು ತನ್ನ ಬಾಯಿಯಲ್ಲಿ ಹಿಡಿದಿಟ್ಟುಕೊಂಡು ನುಂಗಲು ಪ್ರಯತ್ನಿಸಿತು, ಅದನ್ನು ಮರಳಿ ಹೊರಕ್ಕೆ ಉಗುಳಿದೆ. ಈ ಭಯಾನಕ ವಿಡಿಯೋವನ್ನು UOldguy ಎಂಬ ಟ್ವಿಟರ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
https://twitter.com/UOldguy/status/1598841142887710720?ref_src=twsrc%5Etfw%7Ctwcamp%5Etweetembed%7Ctwterm%5E1598841142887710720%7Ctwgr%5Ea97585d9e69b52953a8ada450a24c924aed384f2%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-tiger-shark-eats-video-camera-while-its-running-3574903