alex Certify ಬಾಸ್ಕೆಟ್​ಬಾಲ್​ ಆಟಗಾರನ ಅದ್ಭುತ ವಿಡಿಯೋ ವೈರಲ್​: ಸ್ಟೆಫ್​ ಆಟಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಸ್ಕೆಟ್​ಬಾಲ್​ ಆಟಗಾರನ ಅದ್ಭುತ ವಿಡಿಯೋ ವೈರಲ್​: ಸ್ಟೆಫ್​ ಆಟಕ್ಕೆ ನೆಟ್ಟಿಗರು ಫಿದಾ

ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಸ್ಟೆಫ್ ಕರ್ರಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಇವರು ಐದು ಬಾಲ್​ಗಳನ್ನು ಬಾಸ್ಕೆಟ್​ಗೆ ಹಾಕಿರುವುದನ್ನು ನೋಡಬಹುದಾಗಿದೆ.

ಫುಲ್-ಕೋರ್ಟ್ ಹೊಡೆತಗಳನ್ನು ಅತ್ಯಂತ ಕಷ್ಟಕರವಾದ ಹೊಡೆತಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಚೆಂಡನ್ನು ಅಂಕಣದ ಇನ್ನೊಂದು ತುದಿಯಿಂದ ಬ್ಯಾಸ್ಕೆಟ್‌ನಲ್ಲಿ ಹಾಕಬೇಕಾಗುತ್ತದೆ. ಆದರೆ ಬಾಸ್ಕೆಟ್​ಬಾಲ್​ನ ಕೋರ್ಟ್‌ನ ಇನ್ನೊಂದು ತುದಿಯಿಂದ ಸ್ಟೆಫ್‌ನ ಒಂದು ಕೈಯಿಂದ ಹೊಡೆದ ಹೊಡೆತಗಳನ್ನು ನೋಡಿ ಇಂಟರ್ನೆಟ್ ಹುಚ್ಚೆದ್ದು ಹೋಗಿದೆ.

ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಕ್ಲಿಪ್ ಅನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಈ ವರ್ಷದ ಡಿಸೆಂಬರ್ 5 ರಂದು ಅಪ್‌ಲೋಡ್ ಮಾಡಲಾಗಿದ್ದು, ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇಲ್ಲಿಯವರೆಗೆ, ಇದು 30.4 ಮಿಲಿಯನ್ ವೀಕ್ಷಣೆಗಳು, 121K ಇಷ್ಟಗಳು ಮತ್ತು 23.2k ರೀಟ್ವೀಟ್‌ಗಳನ್ನು ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...