ಗಂಗನಚುಂಬಿ ಕಟ್ಟಡಗಳನ್ನ ನಿರ್ಮಾಣ ಮಾಡಬೇಕು ಅಂದರೆ ವರ್ಷಾನುಗಟ್ಟಲೇ ಪರಿಶ್ರಮ ಅತ್ಯಗತ್ಯ. ಆದರೆ ಚೀನಾದ ಚಂಗ್ಶಾದಲ್ಲಿರುವ ಕಟ್ಟಡ ಕಾಮಗಾರಿ ನಡೆಸುವ ಕಂಪನಿ ಮಾತ್ರ ಈ ಮಾತಿಗೆ ತದ್ವಿರುದ್ಧ ಎಂಬಂತೆ ಕೆಲಸ ಮಾಡಿ ತೋರಿಸಿದೆ. ಕೇವಲ 28 ಗಂಟೆ 45 ನಿಮಿಷಗಳಲ್ಲಿ ಈ ಕಂಪನಿಯು 10 ಅಂತಸ್ತಿನ ಕಟ್ಟಡವನ್ನ ನಿರ್ಮಾಣ ಮಾಡಿದೆ.
ಅರೇ….! ಇಷ್ಟು ಕಡಿಮೆ ಸಮಯದಲ್ಲಿ ಗಗನಚುಂಬಿ ಕಟ್ಟಡ ನಿರ್ಮಾಣ ಕಾರ್ಯ ಹೇಗೆ ಸಾಧ್ಯವಾಯ್ತು ಎಂದು ನೀವು ಯೋಚಿಸ್ತಾ ಇರಬಹುದು. ಇದೊಂದು ಪೂರ್ವ ನಿರ್ಮಿತ ಕಟ್ಟಡ ನಿರ್ಮಾಣ ವ್ಯವಸ್ಥೆ ತಂತ್ರಜ್ಞಾನವಾಗಿದೆ. ಈ ಕಂಪನಿಯು ಮೊದಲೇ ಅಂತಸ್ತುಗಳನ್ನ ನಿರ್ಮಾಣ ಮಾಡಿಕೊಂಡಿರುತ್ತದೆ.
ಬಳಿಕ ಇದನ್ನ ಜೋಡಣೆ ಮಾಡುವ ಪ್ರಕ್ರಿಯೆಯನ್ನ ಮಾಡಲಾಗುತ್ತೆ. ಎಲ್ಲಾ ಅಂತಸ್ತುಗಳನ್ನ ಒಂದರ ಮೇಲೆ ಒಂದರಂತೆ ಜೋಡಣೆ ಮಾಡಿದ ಬಳಿಕ ನೀರಿನ ಸೌಲಭ್ಯ ಹಾಗೂ ವಿದ್ಯುತ್ ಸೌಲಭ್ಯಗಳನ್ನ ಒದಗಿಸಲಾಗುತ್ತದೆ.
ಯುಟ್ಯೂಬ್ನಲ್ಲಿ ಪೋಸ್ಟ್ ಮಾಡಲಾದ 4 ನಿಮಿಷ 52 ಸೆಕೆಂಡ್ನ ವಿಡಿಯೋದಲ್ಲಿ ಈ ಗಗನಚುಂಬಿ ಕಟ್ಟಡವನ್ನ ಹೇಗೆ ನಿರ್ಮಾಣ ಮಾಡಲಾಯ್ತು ಅನ್ನೋದನ್ನ ತೋರಿಸಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.