ಸಮುದ್ರದ ಅಡಿಯಲ್ಲಿ ವಿವಿಧ ಜಾತಿಯ ಮೀನುಗಳಿವೆ. ಅವುಗಳಲ್ಲಿ ಕೆಲವು ನಮಗೆ ತಿಳಿದಿದ್ದರೂ ಹೆಸರೇ ತಿಳಿದಿಲ್ಲದ ಹಲವು ಬಗೆಯವು ಇವೆ.
ಇತ್ತೀಚೆಗೆ ನೆಟ್ಟಿಗರನ್ನು ರಂಜಿಸಿದ ವಿಡಿಯೊವೊಂದರಲ್ಲಿ ನಗುವಂತೆ ಕಾಣುವ ಮೀನು ಕಾಣಿಸುತ್ತಿದೆ. ನೆದರ್ಲ್ಯಾಂಡ್ ನಿವಾಸಿ ಎಂದು ಹೇಳಿಕೊಳ್ಳುವ ಬ್ಯುಟೆಂಗೆಬೀಡೆನ್ ಹೆಸರಿನ ಖಾತೆಯು ಈಗ ವೈರಲ್ ವಿಡಿಯೊವನ್ನು ಹಂಚಿಕೊಂಡಿದೆ. “ನಮಗೆಲ್ಲರಿಗೂ ಈ ನಗು ಬೇಕು…..” ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಇದೆ.
7 ಸೆಕೆಂಡ್ಗಳ ವಿಡಿಯೊವು ನೀರಿನ ಅಡಿಯಲ್ಲಿ ಈಜುತ್ತಿರುವ ಮೀನುಗಳನ್ನು ತೋರಿಸುತ್ತದೆ. ಅವೆಲ್ಲವೂ ದೊಡ್ಡ ಕಣ್ಣುಗಳೊಂದಿಗೆ ಸಣ್ಣ, ಅಂಡಾಕಾರದ ಆಕಾರದ ದೇಹಗಳನ್ನು ಹೊಂದಿದ್ದರೂ ಜನರ ಗಮನ ಸೆಳೆದದ್ದು ಮೀನುಗಳೆಲ್ಲ ನಗುತ್ತಿರುವಂತೆ ಕಾಣುತ್ತಿವೆ.
ಮೇಲ್ನೋಟಕ್ಕೆ, ಈ ನಗುತ್ತಿರುವ ಮೀನುಗಳು ಮುದ್ದಾಗಿ ಕಾಣಿಸಬಹುದು, ಅವುಗಳು ಸಾಕಷ್ಟು ಅಪಾಯಕಾರಿ ತಳಿಗಳಾಗಿವೆ. ಅವುಗಳನ್ನು ಮುಖ್ಯವಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಸಾಗರಗಳಲ್ಲಿ ಕಂಡುಬರುವ ಪಫರ್ ಮೀನು ಎಂದು ಕರೆಯಲಾಗುತ್ತದೆ.
ಅವುಗಳಿಗೆ ಹೆದರಿಕೆ ಎದುರಾದಾಗ ಅಥವಾ ಬೇಟೆಯನ್ನು ಹುಡುಕಿದಾಗ ಈ ಮೀನುಗಳು ಬಲೂನಿನಂತೆ ತಮ್ಮನ್ನು ಉಬ್ಬಿಸಿಕೊಳ್ಳುತ್ತವೆ ಮತ್ತು ಅವುಗಳ ದೇಹದಿಂದ ಮೊನಚಾದ ಮುಳ್ಳುಗಳು ಹೊರಹೊಮ್ಮುತ್ತವೆ. ಈ ಮುಳ್ಳುಗಳು ವಿಷದಿಂದ ತುಂಬಿವೆ.
ಸೈನೈಡ್ ರಾಸಾಯನಿಕಕ್ಕಿಂತ ಕೆಟ್ಟದಾಗಿರುವ ವಿಷ ಇದರಲ್ಲಿದ್ದು, ಹೆಚ್ಚು ಮಾರಕವೆಂದು ಪರಿಗಣಿಸಲಾಗಿದೆ. ಇದು ಸೈನೈಡ್ಗಿಂತ ಸುಮಾರು 1200 ಪಟ್ಟು ಹೆಚ್ಚು ವಿಷಕಾರಿಯಾಗಿದೆ. ಇವು ವಿಷಪೂರಿತ ಮುಳ್ಳುಗಳಿಂದ ಒಂದು ಕ್ಷಣದಲ್ಲಿ 30 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ. ಈ ನಗುವ ಮೀನಿನ ವೀಡಿಯೊ 7.9 ಮಿಲಿಯನ್ ವೀಕ್ಷಣೆಯಾಗಿದ್ದು, 334.9 ಕೆ ಗಿಂತ ಹೆಚ್ಚು ಲೈಕ್ ಗಳಿಸಿದೆ.
https://twitter.com/buitengebieden/status/1563046568160542723?ref_src=twsrc%5Etfw%7Ctwcamp%5Etweetembed%7Ctwterm%5E1563046568160542723%7Ctwgr%5E35ec2f27b060c82aa992e49f9243bfe440636d5b%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-theres-more-to-this-smiling-fish-than-meets-the-eye-5834065.html