alex Certify ಭೂಕಂಪದಿಂದಾಗಿ ಆಟಿಕೆಯಂತೆ ಅಲುಗಾಡಿದ ರೈಲಿನ ಬೋಗಿಗಳು; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಕಂಪದಿಂದಾಗಿ ಆಟಿಕೆಯಂತೆ ಅಲುಗಾಡಿದ ರೈಲಿನ ಬೋಗಿಗಳು; ವಿಡಿಯೋ ವೈರಲ್

ತೈವಾನ್‌ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪನದ ಪರಿಣಾಮ ತೈವಾನ್ 10 ಕಿಲೋಮೀಟರ್ ಆಳದಲ್ಲಿ ಕರಾವಳಿ ನಗರವಾದ ಟೈಟುಂಗ್‌ನಿಂದ ಉತ್ತರಕ್ಕೆ 50 ಕಿಲೋಮೀಟರ್ ಕಂಪನವಾಗಿರುವುದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿಯಲ್ಲಿ ತಿಳಿಸಿದೆ. ‌

ಭಾನುವಾರ ರಾತ್ರಿ 9:30 ರ ನಂತರ ಈ ಕಂಪನ ನಡೆದಿದೆ. 6.5 ತೀವ್ರತೆಯ ಭೂಕಂಪ ಸಂಭವಿಸಿದ ಒಂದು ದಿನದ ನಂತರ ಈ ಪ್ರದೇಶದಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ ಎಂದು USGS ಹೇಳಿದೆ.

ಈ ಭೂಕಂಪನದ ಪರಿಣಾಮ ಎಷ್ಟು ಭಯಂಕರವಾಗಿದೆ ಎಂದರೆ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಬೋಗಿಗಳು ಆಟಿಕೆಯಂತೆ ಗಡಗಡನೇ ಅಲುಗಾಡಿದೆ. ಈ ವಿಡಿಯೋ ಈಗ ಟ್ವಿಟರ್‌ನಲ್ಲಿ ವೈರಲ್‌ ಆಗುತ್ತಿದೆ. ತೈವಾನ್ ಮಾಧ್ಯಮ ವರದಿಯ ಪ್ರಕಾರ, ಭೂಕಂಪದ ಕೇಂದ್ರದ ಬಳಿ ಎರಡು ಅಂತಸ್ತಿನ ವಸತಿ ಕಟ್ಟಡ ಕುಸಿದು ಬಿದ್ದಿದೆ. ರಾಜಧಾನಿ ತೈಪೆಯ ದ್ವೀಪದ ಉತ್ತರ ತುದಿಯಲ್ಲಿ ಕಂಪನದ ಅನುಭವವಾಗಿದೆ.

ಈ ವಿಡಿಯೋದಲ್ಲಿ ರೈಲು ಅಲುಗಾಡುವ ದೃಶ್ಯ ಭೂಕಂಪನದ ತೀವ್ರತೆಗೆ ಹಿಡಿದ ಕೈಗನ್ನಡಿಯಂತಾಗಿದೆ. ತೈವಾನ್‌ನ ಆಗ್ನೇಯ ಕರಾವಳಿಯಲ್ಲಿ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ, ಸಣ್ಣ ಪಟ್ಟಣದಲ್ಲಿ ಕನಿಷ್ಟ ಒಂದು ಕಟ್ಟಡ ಕುಸಿದಿದೆ ಮತ್ತು ಸುನಾಮಿ ಎಚ್ಚರಿಕೆ ನೀಡಲು ಜಪಾನ್‌ಗೆ ಪ್ರೇರೇಪಿಸಿದೆ.

ಟ್ವಿಟರ್‌ನಲ್ಲಿ ವೈರಲ್‌ ಆಗುತ್ತಿರುವ ವಿಡಿಯೋಗಳಲ್ಲಿ ಭಯಭೀತರಾದ ನಿವಾಸಿಗಳು ಕಟ್ಟಡದಿಂದ ಆಚೆ ಓಡಿಬರುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ತೈವಾನ್‌ ರಾಜಧಾನಿ ತೈಪೆಯಲ್ಲೂ ಕಟ್ಟಡಗಳು ಅಲುಗಾಡುವ ಅನುಭವವಾಗಿದೆ ಎಂದು ಎಎಫ್‌ಪಿ ವರದಿಗಾರರು ತಿಳಿಸಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 1999 ರಲ್ಲಿ ತೈವಾನ್‌ನ ಅತ್ಯಂತ ಭೀಕರ ಭೂಕಂಪನಕ್ಕೆ ಸಾಕ್ಷಿಯಾಗಿತ್ತು. ಇದು 2,400 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...