
ಮಳೆಗಾಲದಲ್ಲಿ ಕೆಲವು ಅತಿಥಿಗಳು ಎಲ್ಲೆಂದರಲ್ಲಿ ಕಾಣಸಿಗುವುದು ಸಾಮಾನ್ಯ. ಅತಿಥಿ ಅಂದ್ರೆ ಬೇರೆ ಯಾರೂ ಅಲ್ಲ.. ಅದು ಸರೀಸೃಪಗಳು.
ಹೌದು, ಇತ್ತೀಚೆಗೆ ಸರೀಸೃಪಗಳು ಎಲ್ಲೆಂದರಲ್ಲಿ ಕಂಡುಬರುತ್ತವೆ. ಅದರಲ್ಲೂ ಮುಖ್ಯವಾಗಿ ನಾಗರಹಾವುಗಳು.
ಇಲ್ಲೊಂದೆಡೆ ಸ್ಕೂಟರ್ ಒಳಗಿದ್ದ ನಾಗರಹಾವನ್ನು ಹೇಗೆ ರಕ್ಷಿಸಲಾಯಿತು ಅನ್ನೋದರ ರೋಚಕ ದೃಶ್ಯ ಸೆರೆಯಾಗಿದ್ದು, ಸದ್ಯ ವೈರಲ್ ಆಗಿದೆ.
ಒಂದು ವರ್ಷದ ಹಿಂದೆಯೇ ಇಂಟರ್ನೆಟ್ ನಲ್ಲಿ ಸದ್ದು ಮಾಡಿದ್ದ ಈ ವಿಡಿಯೋವನ್ನು ಇದೀಗ ಭಾರತೀಯ ಅರಣ್ಯ ಸೇವಾ ಅಧಿಕಾರಿಯಾಗಿರುವ ಸುಸಂತ ನಂದಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತೆಲಂಗಾಣದಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ.
ಗ್ರಾಮೀಣ ಭಾಗದ ವ್ಯಾಪಾರಿಗಳಿಗೆ ಗುಡ್ ನ್ಯೂಸ್….! ಇಂಟರ್ನೆಟ್ ಸೌಕರ್ಯವಿಲ್ಲದೆಯೇ ಸ್ವೀಕರಿಸಬಹುದು ಡಿಜಿಟಲ್ ಪಾವತಿ
ಎರಡು ನಿಮಿಷ ಮತ್ತು ಏಳು ಸೆಕೆಂಡುಗಳ ಉದ್ದದ ಕ್ಲಿಪ್ ನಲ್ಲಿ, ಹಾವು ಸ್ಕೂಟರ್ ನಿಂದ ಹೊರಬರುವುದನ್ನು ನೋಡಬಹುದು.
ಉರಗ ತಜ್ಞ ಕುಡಿಯುವ ನೀರಿನ ಕ್ಯಾನ್ ನಿಂದ ಹಾವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಕೊನೆಗೂ ಹಾವು ಹೇಗೆ ನೀರಿನ ಬಾಟಲಿಯೊಳಗೆ ಹೋಯಿತು ಅನ್ನೋ ದೃಶ್ಯ ರೋಚಕವಾಗಿದೆ. ಒಮ್ಮೆ ಹಾವು ಒಳಗೆ ಹೋದ ಕೂಡಲೇ ಬಾಟಲಿ ಬೇಗನೆ ಮುಚ್ಚಳ ಹಾಕಿದ್ದಾರೆ. ಎದೆ ಝಲ್ಲೆನ್ನಿಸುವ ಈ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.
“ಮಳೆಗಾಲದಲ್ಲಿ ಇಂತಹ ಅತಿಥಿಗಳು ಸಾಮಾನ್ಯ. ಆದರೆ ಅದನ್ನು ರಕ್ಷಿಸಲು ಬಳಸುವ ವಿಧಾನ ಅಸಾಮಾನ್ಯವಾಗಿದೆ. ಇದನ್ನು ಎಂದಿಗೂ ಪ್ರಯತ್ನಿಸಬೇಡಿ” ಎಂದು ನಂದಾ ಅವರು ಬರೆದಿದ್ದಾರೆ.