alex Certify ಗ್ರಾಮೀಣ ಭಾಗದ ವ್ಯಾಪಾರಿಗಳಿಗೆ ಗುಡ್​ ನ್ಯೂಸ್​….! ಇಂಟರ್ನೆಟ್​ ಸೌಕರ್ಯವಿಲ್ಲದೆಯೇ ಸ್ವೀಕರಿಸಬಹುದು ಡಿಜಿಟಲ್​ ಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಭಾಗದ ವ್ಯಾಪಾರಿಗಳಿಗೆ ಗುಡ್​ ನ್ಯೂಸ್​….! ಇಂಟರ್ನೆಟ್​ ಸೌಕರ್ಯವಿಲ್ಲದೆಯೇ ಸ್ವೀಕರಿಸಬಹುದು ಡಿಜಿಟಲ್​ ಪಾವತಿ

ಡಿಜಿಟಲ್​ ಪೇಮೆಂಟ್​ಗಳ ದೈತ್ಯ ವೀಸಾ ಹಾಗೂ ಇನ್ನೋವಿಟಿ ಪೇಮೆಂಟ್ ಸೊಲ್ಯೂಷನ್ಸ್​​ ಭಾರತದಲ್ಲಿ ಆಫ್​ಲೈನ್​ ಪಾವತಿಗಳಿಗೆ ಅವಕಾಶ ಒದಗಿಸುವ ಸಲುವಾಗಿ ಪಿಓಸಿ ಚಾಲನೆ ಮಾಡಲು ಪಾಲುದಾರಿಕೆ ಮಾಡಿಕೊಂಡಿದೆ. ಯಸ್​ ಬ್ಯಾಂಕ್​ ಹಾಗೂ ಆಕ್ಸಿಸ್​ ಬ್ಯಾಂಕ್​ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಪಿಓಸಿಯನ್ನು ಕಾರ್ಯಗತಗೊಳಿಸಲಾಗಿದೆ.

ಆಫ್​ಲೈನ್​ ಪೇಮೆಂಟ್​ ಟೆಕ್ನಾಲಜಿಯಿಂದ ಗ್ರಾಮೀಣ ಭಾಗಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಡಿಜಿಟಲ್​ ಪಾವತಿಗಳ ವ್ಯಾಪ್ತಿಯನ್ನು ಸುಧಾರಿಸಲಿದೆ. ಚಿಪ್​ ಆಧಾರಿತ ವೀಸಾ ಡೆಬಿಟ್​, ಕ್ರೆಡಿಟ್​ ಹಾಗೂ ಪ್ರೀಪೇಯ್ಡ್​ ಕಾರ್ಡ್​ಗಳ ಮೂಲಕ ಇಂಟರ್ನೆಟ್​ ಸಂಪರ್ಕ ಇಲ್ಲದೆಯೂ ಹಣ ಪಾವತಿ ಮಾಡಬಹುದಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲು ಆರ್ಥಿಕತೆಯನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ.

ಇಂಟರ್ನೆಟ್​ ಸಂಪರ್ಕದ ವಿಚಾರದಲ್ಲಿ ಭಾರತದ ಗ್ರಾಮೀಣ ಭಾಗಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತದೆ. ಇಂಟರ್ನೆಟ್​ ಸಮಸ್ಯೆಯಿಂದಾಗಿ ದೇಶದ ಸಣ್ಣ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್​ ಪಾವತಿಗಳನ್ನು ನಂಬಿಕೊಂಡು ಕೂರಲು ಸಾಧ್ಯವೇ ಇಲ್ಲ. ಆದರೆ ಈ ಆಫ್​ಲೈನ್​ ಪಾವತಿ ತಂತ್ರಜ್ಞಾನವು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ನಿಲ್ಲಲಿದೆ ಎಂಬ ನಂಬಿಕೆ ಇದೆ. ಆಫ್​ಲೈನ್​ ಡಿಜಿಟಲ್​ ಪಾವತಿಯ ಮೂಲಕ ವ್ಯಾಪಾರಿಗಳು ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಇನ್ನೋವಿಟಿ ಹೇಳಿಕೆ ನೀಡಿದೆ.

ಆಫ್​ಲೈನ್​ ಪಾವತಿ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ..?

ಹೊಸ ವೀಸಾ ಡೆಬಿಟ್​ ಕಾರ್ಡ್​ನಲ್ಲಿರುವ ಚಿಪ್​ ದೈನಂದಿನ ಖರ್ಚು ಮಿತಿಯ 2000 ರೂಪಾಯಿ ಸಂಗ್ರಹಣಾ ಮೌಲ್ಯವನ್ನು ಹೊಂದಿರುತ್ತದೆ. ಆರ್​ಬಿಐನ ನಿರ್ದೇಶನದಂತೆ ಪ್ರತಿ ವಹಿವಾಟು ಮಿತಿಯು 200 ರೂಪಾಯಿ ಆಗಿದೆ. ಇ ವ್ಯಾಲೆಟ್​ಗಳಲ್ಲಿ ಮೊದಲೇ ಹಣವನ್ನು ಲೋಡ್​ ಮಾಡಿದ ರೀತಿಯಲ್ಲೇ ಇದು ಕಾರ್ಯ ನಿರ್ವಹಿಸುತ್ತದೆ. ಚಿಪ್​ನಲ್ಲಿ ಹಣ ಇಲ್ಲದೇ ಇದ್ದಾಗ ಪಾವತಿ ರದ್ದಾಗುತ್ತದೆ.

ಪಾವತಿ ಅಡಚಣೆಯ ಸಮಸ್ಯೆಯಿಂದ ಪಾರಾಗುವ ಮೂಲಕ ವ್ಯಾಪಾರಿಗಳು ಕೂಡ ಗ್ರಾಹಕರನ್ನು ಕಳೆದುಕೊಳ್ಳುವ ಪ್ರಮೇಯ ಇರುವುದಿಲ್ಲ. ಗ್ರಾಹಕರಿಗೂ ಕೂಡ ಎಟಿಎಂ ಅಲೆಯಬೇಕು ಎಂಬ ಸಮಸ್ಯೆ ಕೂಡ ಇರೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...