
ತಮ್ಮ ಸಾಕು ನಾಯಿ ಗೋಪಿಯ ಹುಟ್ಟುಹಬ್ಬದ ನಿಮಿತ್ತ ಸುಧಾ ಮೂರ್ತಿ ಹಾಗೂ ಅವರ ಸಹೋದರಿ ತಮ್ಮ ಮುದ್ದಿನ ನಾಯಿಗೆ ಆರತಿ ಬೆಳಗಿದ್ದಾರೆ. ಸಹೋದರಿಯರಿಬ್ಬರೂ ವಿಧಿವತ್ತಾಗಿ ನಾಯಿಗೆ ಆರತಿ ಬೆಳಗುತ್ತಾ, ತಮ್ಮ ಮುದ್ದಿನ ಶ್ವಾನವನ್ನು ಪ್ರೀತಿಯಿಂದ ಮುದ್ದಿಸುತ್ತಾ ಹುಟ್ಟುಹಬ್ಬದ ಶುಭಾಶಯಗಳನ್ನು ಹಾಡಿದ್ದಾರೆ.
ಸಾಕು ನಾಯಿ ಅಂದ್ರೆ ಅದು ಕೇವಲ ಶ್ವಾನವಾಗಿರದೆ ನಮ್ಮ ಕುಟುಂಬದ ಸದಸ್ಯನಂತಿರುತ್ತದೆ. ಹಾಗೆಯೇ ಸುಧಾ ಮೂರ್ತಿ ಅವರ ಮನೆಯಲ್ಲೂ ಕೂಡ ತಮ್ಮ ಶ್ವಾನಕ್ಕೆ ಕುಟುಂಬದ ಸದಸ್ಯನ ಸ್ಥಾನವನ್ನೇ ನೀಡಲಾಗಿದೆ. ಹೀಗಾಗಿ ಶ್ವಾನದ ಹುಟ್ಟುಹಬ್ಬದ ನಿಮಿತ್ತ ಅದಕ್ಕೆ ಆರತಿ ಬೆಳಗೆ, ಸಂಭ್ರಮಿಸಿದ್ದಾರೆ.
ಆರ್.ಶ್ರೀಕಾಂತ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು 30,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.