alex Certify ಹಿಮದ ಮೇಲೆ ಭವ್ಯ ಚಿರತೆ; ವಿಡಿಯೋ ವೈರಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮದ ಮೇಲೆ ಭವ್ಯ ಚಿರತೆ; ವಿಡಿಯೋ ವೈರಲ್‌

ಹಿಮಾಚಲ ಪ್ರದೇಶದಲ್ಲಿ ಹಿಮ ಚಿರತೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಕಂಡುಬಂದ ಹಿಮ ಚಿರತೆ ಭವ್ಯವಾಗಿದ್ದು, ಅಪರೂಪವಾಗಿದೆ. ಇದರ ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

ಕಾಜಾದ ಚಿಚಾಮ್ ಗ್ರಾಮದಲ್ಲಿ ಬಂಡೆಗಳ ಮೇಲೆ ಹಿಮ ಚಿರತೆ ಕಾಣಿಸಿಕೊಂಡಿದೆ. ಹಿಮಾಚಲ ಪ್ರದೇಶ ಸರ್ಕಾರದ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ್ ಬನ್ಯಾಲ್ ಅವರು ಇದರ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ, ಹಿಮ ಚಿರತೆ ವಿಶ್ರಾಂತಿ ಪಡೆಯಲು ಪ್ರಯತ್ನಿಸುತ್ತಿರುವಾಗ ತನ್ನನ್ನು ತಾನೇ ಹೊಂದಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. “ಡಿಸೆಂಬರ್ 26 ರಂದು ಲಾಹೌಲ್-ಸ್ಪಿಟಿ ಜಿಲ್ಲೆಯ ಕಾಜಾದ ಚಿಚಾಮ್ ಗ್ರಾಮದಲ್ಲಿ ಹಿಮ ಚಿರತೆ ಕಾಣಿಸಿಕೊಂಡಿದೆ” ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...