
ಜನಪ್ರಿಯ ನಟ, ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ದಾರ್ಥ್ ಶುಕ್ಲಾ ತಮ್ಮ 40ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಿದ್ದಾರ್ಥ್ ಸಾವಿನ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
ಬಿಗ್ ಬಾಸ್ ಸೀಸನ್ 13ರ ರಿಯಾಲಿಟಿ ಶೋ ಗೆದ್ದ ಬಳಿಕ ಇವರ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿತ್ತು. ಬಿಬಿ 13ರಲ್ಲಿ ಸಹ ಸ್ಪರ್ಧಿಗಳೊಂದಿಗೆ ತಮ್ಮ ಮೋಡಿ ಮತ್ತು ಪ್ರಣಯದಿಂದ ಅಭಿಮಾನಿಗಳನ್ನು ರಂಜಿಸಿದ್ದರು.
ಬಿಬಿ ಶೋ ಅಂತಿಮ ಹಣಾಹಣಿಯಲ್ಲಿ ಸಿದ್ದಾರ್ಥ್, ಅಸಿಮ್ ರಿಯಾಜ್ ಅವರನ್ನು ಸೋಲಿಸಿ ಅಂತಿಮವಾಗಿ ಅಗ್ರ ಸ್ಥಾನಕ್ಕೇರಿದ್ದರು. ಅವರ ಗೆಲುವಿನ ಕ್ಷಣ ಇನ್ನೂ ತಾಜಾವಾಗಿದೆ. ಸಿದ್ದಾರ್ಥ್ ಗೆ ಕಣ್ಣೀರು ತುಂಬಿದ ವಿದಾಯ ಹೇಳುತ್ತಿದ್ದಂತೆ, ನಟ ವಿಜೇತ ಟ್ರೋಫಿಯನ್ನು ಎತ್ತುವ ಕ್ಷಣವನ್ನು ಇಲ್ಲಿ ರಿವೈಂಡ್ ಮಾಡಲಾಗುತ್ತಿದೆ.
BIG NEWS: ದೂರಶಿಕ್ಷಣ ಕೋರ್ಸ್ ನಡೆಸಲು UGC ಯಿಂದ 11 ವಿವಿ ಗಳಿಗೆ ಅನುಮತಿ
ಆನ್ ಲೈನ್ ನಲ್ಲಿ ಹರಿದಾಡುತ್ತಿರುವ ವಿಡಿಯೋ, ಸಿದ್ದಾರ್ಥ್ ವಿಜೇತರೆಂದು ಘೋಷಿಸುವ ಕ್ಷಣವನ್ನು ತೋರಿಸುತ್ತದೆ. ಫೈನಲ್ ವೇಳೆ ಅವರು ದೊಡ್ಡ ಪರದೆಯ ಪ್ರೊಜೆಕ್ಟರ್ ನಲ್ಲಿ ಕಾರ್ಯಕ್ರಮದಲ್ಲಿನ ತಮ್ಮ ಪ್ರಯಾಣವನ್ನು ನೋಡುತ್ತಿದ್ದಾರೆ.
ಸಂತೋಷ ಹಾಗೂ ದುಃಖದ ಕ್ಷಣಗಳನ್ನು ಹಿಂತಿರುಗಿ ನೋಡಿದಾಗ ನಟ ಭಾವುಕರಾದರು. ವೇದಿಕೆಯಲ್ಲಿ ತಮ್ಮ ನೆಚ್ಚಿನ ನಟನನ್ನು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ವೇದಿಕೆಯಿಂದಲೇ ತಮ್ಮ ಪ್ರೀತಿಯನ್ನು ಕಳುಹಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಬಿಬಿ 13ರಲ್ಲಿ ಅವರು 40 ಲಕ್ಷ ರೂ. ನಗದು ಬಹುಮಾನ ಪಡೆದಿದ್ದರು. ಹೃದಯಾಘಾತದಿಂದ ನಿಧನರಾಗಿರುವ ಸಿದ್ದಾರ್ಥ್ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
https://www.instagram.com/p/CTT9ZcigCfg/?utm_source=ig_embed&ig_rid=2d7270a3-2ea0-4ba9-973d-c2dd0ea54137