alex Certify ʼಮನ್ನತ್‌ʼ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಶಾರುಖ್​ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮನ್ನತ್‌ʼ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಶಾರುಖ್​ ಕುಟುಂಬ

Shah Rukh Khan, wife Gauri join Har Ghar Tiranga campaign, pose with Aryan,  AbRam at Mannat - Movies News

ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ನಡೆದಿದೆ. ಹಿರಿಯ ಕಿರಿಯರೆನ್ನದೇ, ಬಡವ ಬಲ್ಲಿದ ಎನ್ನದೇ ಎಲ್ಲರೂ ಆಚರಿಸುತ್ತಿದ್ದಾರೆ. ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖಾನ್​ ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ 75ನೇ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರಧ್ವಜಾರೋಹಣ ಮಾಡಿದರು.

ಅವರ ಪತ್ನಿ, ಇಂಟೀರಿಯರ್​ ಡಿಸೈನರ್​ ಗೌರಿ ಖಾನ್​ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಶಾರುಖ್​, ಆರ್ಯನ್​ ಖಾನ್​, ಅಬ್ರಾಹಂ​ ರಾಷ್ಟ್ರಧ್ವಜದೊಂದಿಗೆ ಪೋಸ್​ ನೀಡುವುದನ್ನು ಕಾಣಬಹುದು. “ಸ್ವಾತಂತ್ರ್ಯ ದಿನದ ಶುಭಾಶಯಗಳು” ಎಂದು ಅವರು ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ. ಶಾರುಖ್​ ಬಿಳಿ ಟೀ ಶರ್ಟ್​ ಮತ್ತು ಪ್ಯಾಂಟ್​ ಧರಿಸಿದ್ದರೆ ಆರ್ಯನ್​ ಸ್ಟೈಲಿಶ್​ ಪೋಸ್​ ನೀಡಿದ್ದಾರೆ.

ಮೋದಿ ಸರ್ಕಾರದ ʼಹರ್​ ಘರ್​ ತಿರಂಗಾʼ ಅಭಿಯಾನಕ್ಕೆ ಕೋಟ್ಯಾಂತರ ಭಾರತೀಯ ನಾಗರಿಕರು ಕೈ ಜೋಡಿಸಿದ್ದು, ಶಾರುಖ್ ಮತ್ತವರ ಕುಟುಂಬ ಕೂಡ ಭಾಗಿಯಾಗಿದೆ.

ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಶಾರುಖ್​ ಧ್ವಜಾರೋಹಣ ಮಾಡುತ್ತಿರುವ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ನಮ್ಮ ದೇಶ ಭಾರತಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ತಿಳಿಸಬೇಕಿದೆ. ಧ್ವಜಾರೋಹಣವು ನಮಗೆಲ್ಲರಿಗೂ ದೇಶದ ಬಗ್ಗೆ ಹೆಮ್ಮೆ, ಪ್ರೀತಿ ಮತ್ತು ಸಂತೋಷವನ್ನು ಉಂಟುಮಾಡುತ್ತದೆ ಎಂದು ವಿಡಿಯೋದೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...