
ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ನಡೆದಿದೆ. ಹಿರಿಯ ಕಿರಿಯರೆನ್ನದೇ, ಬಡವ ಬಲ್ಲಿದ ಎನ್ನದೇ ಎಲ್ಲರೂ ಆಚರಿಸುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖಾನ್ ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ 75ನೇ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರಧ್ವಜಾರೋಹಣ ಮಾಡಿದರು.
ಅವರ ಪತ್ನಿ, ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಶಾರುಖ್, ಆರ್ಯನ್ ಖಾನ್, ಅಬ್ರಾಹಂ ರಾಷ್ಟ್ರಧ್ವಜದೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು. “ಸ್ವಾತಂತ್ರ್ಯ ದಿನದ ಶುಭಾಶಯಗಳು” ಎಂದು ಅವರು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಶಾರುಖ್ ಬಿಳಿ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರೆ ಆರ್ಯನ್ ಸ್ಟೈಲಿಶ್ ಪೋಸ್ ನೀಡಿದ್ದಾರೆ.
ಮೋದಿ ಸರ್ಕಾರದ ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಕೋಟ್ಯಾಂತರ ಭಾರತೀಯ ನಾಗರಿಕರು ಕೈ ಜೋಡಿಸಿದ್ದು, ಶಾರುಖ್ ಮತ್ತವರ ಕುಟುಂಬ ಕೂಡ ಭಾಗಿಯಾಗಿದೆ.
ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶಾರುಖ್ ಧ್ವಜಾರೋಹಣ ಮಾಡುತ್ತಿರುವ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ನಮ್ಮ ದೇಶ ಭಾರತಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ತಿಳಿಸಬೇಕಿದೆ. ಧ್ವಜಾರೋಹಣವು ನಮಗೆಲ್ಲರಿಗೂ ದೇಶದ ಬಗ್ಗೆ ಹೆಮ್ಮೆ, ಪ್ರೀತಿ ಮತ್ತು ಸಂತೋಷವನ್ನು ಉಂಟುಮಾಡುತ್ತದೆ ಎಂದು ವಿಡಿಯೋದೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.