alex Certify Watch Video | ಹಿಂದಿ ಭಾಷೆ ಅರ್ಥ ಮಾಡಿಕೊಂಡಿದ್ದಲ್ಲದೇ ಇಂಗ್ಲೀಷ್​ಗೆ ಯಥಾವತ್​ ಅನುವಾದಿಸಿದ ರಷ್ಯನ್​ ಮಹಿಳೆ; ನೆಟ್ಟಿಗರು ಶಾಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಹಿಂದಿ ಭಾಷೆ ಅರ್ಥ ಮಾಡಿಕೊಂಡಿದ್ದಲ್ಲದೇ ಇಂಗ್ಲೀಷ್​ಗೆ ಯಥಾವತ್​ ಅನುವಾದಿಸಿದ ರಷ್ಯನ್​ ಮಹಿಳೆ; ನೆಟ್ಟಿಗರು ಶಾಕ್​

ರಷ್ಯಾದಲ್ಲಿ ವಾಸಿಸುವವರಿಗೆ ಸರಿಯಾಗಿ ಇಂಗ್ಲೀಷ್​ ಮಾತನಾಡೋಕೆ ಬರಲ್ಲ. ಅಂತದ್ರಲ್ಲಿ ಅವರು ಹಿಂದಿ ಭಾಷೆ ಅರ್ಥ ಮಾಡಿಕೊಳ್ತಾರೆ ಎಂದರೆ ನೀವು ನಂಬ್ತೀರಾ..?

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ರಷ್ಯಾದ ಮಹಿಳೆಯು ಹಿಂದಿ ಭಾಷೆಯನ್ನು ಇಂಗ್ಲೀಷ್​ಗೆ ಅನುವಾದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸೆಪ್ಟೆಂಬರ್ 14ರಂದು ಅಚರಿಸಲ್ಪಡುವ ಹಿಂದಿ ದಿವಸ್​ ಪ್ರಯುಕ್ತ ಭಾರತೀಯ ರೈಲ್ವೆ ಇಲಾಖೆಯ ಸಿವಿಲ್​ ಸರ್ವಂಟ್​​ ಜೆ ಸಂಜಯ್​ ಕುಮಾರ್​ ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ವಿಡಿಯೋದಲ್ಲಿ ಸಂಜಯ್​ ಕುಮಾರ್​ ಹಾಗೂ ರಷ್ಯಾದ ಮಹಿಳೆಯು ರೆಸ್ಟಾರೆಂಟ್​ ಒಂದರಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಸಂಜಯ್​ ರಷ್ಯಾದ ಮಹಿಳೆಯ ಜೊತೆಯಲ್ಲಿ ಹಿಂದಿಯಲ್ಲಿಯೇ ಮಾತನಾಡಿದ್ದಾರೆ.

ಸಂಜಯ್​ರ ಶುದ್ಧ ಹಿಂದಿಯನ್ನು, ಕ್ಲಿಷ್ಟಕರ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಮೊದ ಮೊದಲು ರಷ್ಯಾದ ಮಹಿಳೆ ಕಷ್ಟಪಟ್ಟಿದ್ದಾರೆ. ಆದರೆ ಸಂಜಯ್​ರ ಮಾತುಗಳನ್ನು ಸರಿಯಾಗಿ ಗ್ರಹಿಸಿಕೊಂಡ ರಷ್ಯಾದ ಮಹಿಳೆಯು ಅವುಗಳನ್ನು ಸರಿಯಾಗಿ ಇಂಗ್ಲೀಷ್​ ಭಾಷೆಗೆ ಅನುವಾದಿಸಿದ್ದಾರೆ.

ಈ ವಿಡಿಯೋವನ್ನು ಶೇರ್ ಮಾಡಿರುವ ಸಂಜಯ್​ ಕುಮಾರ್​, ರಷ್ಯಾದ ಮಹಿಳೆಯು ಹಿಂದಿ ಭಾಷೆಯಲ್ಲಿ ಹೊಂದಿರುವ ಪ್ರಾವಿಣ್ಯತೆ ನಿಜಕ್ಕೂ ಅದ್ಭುತವಾಗಿದೆ ಎಂದು ಈ ವಿಡಿಯೋಗೆ ಅವರು ಶೀರ್ಷಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...