ರಷ್ಯಾದಲ್ಲಿ ವಾಸಿಸುವವರಿಗೆ ಸರಿಯಾಗಿ ಇಂಗ್ಲೀಷ್ ಮಾತನಾಡೋಕೆ ಬರಲ್ಲ. ಅಂತದ್ರಲ್ಲಿ ಅವರು ಹಿಂದಿ ಭಾಷೆ ಅರ್ಥ ಮಾಡಿಕೊಳ್ತಾರೆ ಎಂದರೆ ನೀವು ನಂಬ್ತೀರಾ..?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರಷ್ಯಾದ ಮಹಿಳೆಯು ಹಿಂದಿ ಭಾಷೆಯನ್ನು ಇಂಗ್ಲೀಷ್ಗೆ ಅನುವಾದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸೆಪ್ಟೆಂಬರ್ 14ರಂದು ಅಚರಿಸಲ್ಪಡುವ ಹಿಂದಿ ದಿವಸ್ ಪ್ರಯುಕ್ತ ಭಾರತೀಯ ರೈಲ್ವೆ ಇಲಾಖೆಯ ಸಿವಿಲ್ ಸರ್ವಂಟ್ ಜೆ ಸಂಜಯ್ ಕುಮಾರ್ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಸಂಜಯ್ ಕುಮಾರ್ ಹಾಗೂ ರಷ್ಯಾದ ಮಹಿಳೆಯು ರೆಸ್ಟಾರೆಂಟ್ ಒಂದರಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಸಂಜಯ್ ರಷ್ಯಾದ ಮಹಿಳೆಯ ಜೊತೆಯಲ್ಲಿ ಹಿಂದಿಯಲ್ಲಿಯೇ ಮಾತನಾಡಿದ್ದಾರೆ.
ಸಂಜಯ್ರ ಶುದ್ಧ ಹಿಂದಿಯನ್ನು, ಕ್ಲಿಷ್ಟಕರ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಮೊದ ಮೊದಲು ರಷ್ಯಾದ ಮಹಿಳೆ ಕಷ್ಟಪಟ್ಟಿದ್ದಾರೆ. ಆದರೆ ಸಂಜಯ್ರ ಮಾತುಗಳನ್ನು ಸರಿಯಾಗಿ ಗ್ರಹಿಸಿಕೊಂಡ ರಷ್ಯಾದ ಮಹಿಳೆಯು ಅವುಗಳನ್ನು ಸರಿಯಾಗಿ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ.
ಈ ವಿಡಿಯೋವನ್ನು ಶೇರ್ ಮಾಡಿರುವ ಸಂಜಯ್ ಕುಮಾರ್, ರಷ್ಯಾದ ಮಹಿಳೆಯು ಹಿಂದಿ ಭಾಷೆಯಲ್ಲಿ ಹೊಂದಿರುವ ಪ್ರಾವಿಣ್ಯತೆ ನಿಜಕ್ಕೂ ಅದ್ಭುತವಾಗಿದೆ ಎಂದು ಈ ವಿಡಿಯೋಗೆ ಅವರು ಶೀರ್ಷಿಕೆ ನೀಡಿದ್ದಾರೆ.