ಕೌನ್ ಬನೇಗಾ ಕರೋಡ್ಪತಿ ಆವೃತ್ತಿಯಲ್ಲಿ ಕ್ರಿಕೆಟಿಗರು ಪಾಲ್ಗೊಂಡಿರೋದನ್ನು ನಾವು ನೋಡಿದ್ದೇವೆ. ತಮ್ಮ ಕ್ರಿಕೆಟ್ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಟೀಂ ಇಂಡಿಯಾ ಅನೇಕ ಆಟಗಾರರು ಹಾಟ್ಸೀಟ್ನಲ್ಲಿ ಕುಳಿತಿದ್ದಾರೆ.
ಆದರೆ ಮಂಗಳವಾರದ ಕೌನ್ ಬನೇಗಾ ಕರೋಡ್ಪತಿ ಎಪಿಸೋಡ್ ಮಾತ್ರ ಕೊಂಚ ಭಿನ್ನವಾಗಿತ್ತು. ಹಾಟ್ಸೀಟ್ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ತನ್ನ ನೆಚ್ಚಿನ ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ.
ಸೌರವ್ ಗಂಗೂಲಿ – ವಿರೇಂದ್ರ ಸೆಹ್ವಾಗ್, ನೀರಜ್ ಚೋಪ್ರಾ – ಪಿಆರ್ ಶ್ರೀಜೆಸ್ ಈಗಾಗಲೇ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಮಾತ್ರ ಅಭಿಮಾನಿಯಿಂದಾಗಿ ರೋಹಿತ್ ಶರ್ಮಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಯ್ತು. ಪ್ರಾಂಶು ಎಂಬ ಸ್ಪರ್ಧಿ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಎಂದರೆ ತಮಗೆಷ್ಟು ಇಷ್ಟ ಎನ್ನೋದನ್ನು ಅಮಿತಾಬ್ ಬಳಿ ಹೇಳಿಕೊಂಡಿದ್ದರು.
ಅಮಿತಾಬ್ ಬಚ್ಚನ್ ನಿಮ್ಮ ಗರ್ಲ್ಫ್ರೆಂಡ್ ಹಾಗೂ ರೋಹಿತ್ ಶರ್ಮಾ ಇಬ್ಬರಲ್ಲಿ ಯಾವ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರಾಂಶು 7 ಕೋಟಿಗೆ ಕೇಳಬಹುದಾದ ಪ್ರಶ್ನೆಗಿಂತಲೂ ಇದು ಹೆಚ್ಚು ಕಠಿಣವಾಗಿದೆ ಎಂದು ಉತ್ತರಿಸಿದ್ದರು.
ರೋಹಿತ್ ಬಗ್ಗೆ ಇಷ್ಟೊಂದು ಅಪಾರ ಪ್ರೀತಿ ಹೊಂದಿರೋದನ್ನು ಗಮನಿಸಿದ ಬಿಗ್ ಬಿ ಅಮಿತಾಭ್, ರೋಹಿತ್ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಪ್ರಾಂಶು ಜೊತೆ ಮಾತನಾಡಿಸಿದ್ದಾರೆ.
ರೋಹಿತ್ರನ್ನು ಬಿಗ್ ಸ್ಕ್ರೀನ್ನಲ್ಲಿ ನೋಡಿ ನಂಬಲಾಗದ ಪ್ರಾಂಶು ಒಮ್ಮೆಲೆ ಭಾವುಕರಾದರು. ರೋಹಿತ್ ಶರ್ಮಾ ತಮ್ಮ ಅಭಿಮಾನಿ ಪ್ರಾಂಶುಗೆ ತಮ್ಮ ಸಹಿ ಇರುವ ಗ್ಲೌಸ್ಗಳನ್ನು ಉಡುಗೊರೆ ರೂಪದಲ್ಲಿ ನೀಡೋದಾಗಿ ಹೇಳಿದ್ದಾರೆ.
https://twitter.com/i/status/1440879681008390146