alex Certify ಹಿಮಸಾರಂಗಗಳ ಫೈಟ್​: ಗೆದ್ದವರ್ಯಾರು ಎಂಬುದಕ್ಕೆ ಇಲ್ಲಿದೆ ವಿಡಿಯೋ ಸಾಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಸಾರಂಗಗಳ ಫೈಟ್​: ಗೆದ್ದವರ್ಯಾರು ಎಂಬುದಕ್ಕೆ ಇಲ್ಲಿದೆ ವಿಡಿಯೋ ಸಾಕ್ಷಿ

ಹಿಮದಲ್ಲಿ ಆರೋಗ್ಯಕರ ಹುಲ್ಲನ್ನು ಹುಡುಕುತ್ತಿರುವ ಹಿಮಸಾರಂಗದ ಸಣ್ಣ ವಿಡಿಯೋ ವೈರಲ್ ಆಗಿದ್ದು, ಇದು ಬೆಚ್ಚಿ ಬೀಳಿಸುವುದು ಗ್ಯಾರೆಂಟಿ. ಹಿಮ ಸಾರಂಗ ನೋಡಲು ಸುಂದರವಾಗಿದ್ದರೂ ಬೆಚ್ಚಿ ಬೀಳಿಸುವುದು ಏಕೆ ಅಂತೀರಾ? ಹಾಗಿದ್ದರೆ ಈ ವಿಡಿಯೋ ನೋಡಬೇಕು.

ಈ ವಿಡಿಯೋ ನೋಡಿದಾಗ ಮೊದಲಿಗೆ ಏನು ಎಂದು ಅರ್ಥ ಆಗುವುದಿಲ್ಲ. ಎರಡೆರಡು ಜೊತೆ ಕೋಡುಗಳು ಇರುವಂತೆ ಕಾಣುತ್ತದೆ. ಆದರೆ ಅಸಲಿಗೆ ಆಗಿರುವುದೇ ಬೇರೆ.

ಇದು ಇನ್ನೊಂದು ಹಿಮ ಸಾರಂಗದ ಜೊತೆ ಜಗಳವಾಗಿ ಬಂದಿದೆ. ಸತ್ತುಹೋಗಿರುವ ಹಿಮಸಾರಂಗದ ಕೋಡು ಈ ಹಿಮಸಾರಂಗದ ಕೋಡಿಗೆ ಅಂಟಿಕೊಂಡಿದೆ. ಇದನ್ನು ನೋಡಿದರೆ ಇವೆರಡು ಅದೆಷ್ಟು ಭೀಕರವಾಗಿ ಜಗಳವಾಡಿರಬಹುದು ಎಂಬುದನ್ನು ಕಲ್ಪನೆ ಮಾಡಿಕೊಳ್ಳಬಹುದು.

“ಜಿಂಕೆಗಳು ಜಗಳವಾಡುತ್ತವೆ ಮತ್ತು ಯಾರು ಗೆದ್ದಿದ್ದಾರೆ ಎಂಬುದು ಸ್ಪಷ್ಟವಾಗಿದೆ……” ಎಂದು ಇದಕ್ಕೆ ಶೀರ್ಷಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಇದಾಗಲೇ 10 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...