ಮನಿಲಾ: ಫಿಲಿಫೈನ್ಸ್ ನ ಮನಿಲಾದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್‌ನ ಸೆಮಿಫೈನಲ್ ನಲ್ಲಿ ಭಾರತದ ಒಲಂಪಿಕ್ ವಿಜೇತೆ ಪಿ.ವಿ. ಸಿಂಧು ಜಪಾನಿನ ಅಕಾನೆ ಯಮಗುಚಿ ವಿರುದ್ದ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದು, ಅಂಕಗಳ ಸಂಬಂಧ ಅಂಪೈರ್ ಜೊತೆ ವಾಗ್ವಾದಕ್ಕಿಳಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಿ.ವಿ. ಸಿಂಧು ಆಟದ ವೇಳೆ ಎದುರಾಳಿಗೆ ಸರ್ವ್ ಮಾಡಲು ಹೆಚ್ಚು ಸಮಯ ತೆಗೆದುಕೊಂಡರು ಎಂಬ ಕಾರಣಕ್ಕೆ ಆಂಪೈರ್ ಪೆನಾಲ್ಟಿ ಪಾಯಿಂಟ್ ನೀಡಿದರು. ಇದರಿಂದ ಅಸಮಾಧಾನಗೊಂಡ ಸಿಂಧು ತಡವಾಗಿದ್ದಕ್ಕೆ ಕಾರಣ ನೀಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಕಾರಣ ವಾಗ್ವಾದಕ್ಕೆ ಇಳಿದಿದ್ದರು ಎಂದು ಹೇಳಲಾಗುತ್ತಿದೆ.
ಜಪಾನಿನ ಅಕಾನೆ ಯಮಗುಚಿ ಇನ್ನೂ ಆಟವಾಡಲು ಸಿದ್ಧವಾಗಿರಲಿಲ್ಲ ಎಂದು ಹೇಳಿದರೂ ಒಪ್ಪದ ಮುಖ್ಯ ರೆಫರಿ ಪೆನಾಲ್ಟಿ ಅಂಕ ನೀಡಿದ ಕಾರಣ ಆಟದಲ್ಲಿ ಮುನ್ನಡೆ ಸಾಧಿಸಿದ್ದ ಪಂದ್ಯದಲ್ಲಿ ಸೋಲುಂಡರು.
ಪಿ.ವಿ. ಸಿಂಧು ಜಪಾನಿನ ಅಕಾನೆ ಯಮಗುಚಿ ವಿರುದ್ದ 3 ಗೇಮ್ಗಳ ಪಂದ್ಯದಲ್ಲಿ 21-13 19-21, 16-21 ಸೋಲಿನ ಕಹಿ ಉಂಡರು. ಈ ಟೂರ್ನಿಯಲ್ಲಿ ಸಿಂಧು ಪಡೆದ 2ನೇ ಪದಕ ಇದಾಗಿದ್ದು, 2014 ರ ಆವೃತ್ತಿಯಲ್ಲಿ ಸಿಂಧು ಕಂಚಿನ ಪದಕ ಪಡೆದಿದ್ದರು.
ಬ್ರೆಜಿಲ್ ಡೆಫ್ ಒಲಿಂಪಿಕ್ ಗೆ ಧಾರವಾಡದ ನಿಧಿ ಆಯ್ಕೆ
ನಾನು ಮುಖ್ಯ ರೆಫರಿಗೆ ಹೇಳಿದೆ ಆದರೆ ಅವರು ಈಗಾಗಲೇ ಪಂದ್ಯ ಮುಗಿದಿದೆ ಎಂದು ಹೇಳಿದರು. ಮುಖ್ಯ ರೆಫರಿಯಾಗಿ, ರೆಫರಿಗಳ ಮುಖ್ಯಸ್ಥರಾಗಿ, ಅವರು ಕನಿಷ್ಠ ತಪ್ಪು ಏನಾಗಿದೆ ಎಂದು ನೋಡಬೇಕು ಮತ್ತು ಮರುಪಂದ್ಯವನ್ನಾದರೂ ಆಡಿಸಬೇಕಿತ್ತು, ಬೇರೆ ಮಾರ್ಗವನ್ನಾದರೂ ಅನುಸರಿಸಬೇಕಿತ್ತು ಎಂಬುದು ನನ್ನ ಭಾವನೆ ಎಂದು ಪಿ.ವಿ. ಸಿಂಧು ಅಸಮಾಧಾನ ಹೊರಹಾಕಿದ್ದಾರೆ.