alex Certify ಗಾಂಧಿ ಗೋಡ್ಸೆ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಪ್ರತಿಭಟನೆ: ಕಪ್ಪು ಪಟ್ಟಿ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಂಧಿ ಗೋಡ್ಸೆ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಪ್ರತಿಭಟನೆ: ಕಪ್ಪು ಪಟ್ಟಿ ಪ್ರದರ್ಶನ

ರಾಜ್‌ಕುಮಾರ್ ಸಂತೋಷಿ ಅವರ ಮುಂಬರುವ ಚಿತ್ರ ‘ಗಾಂಧಿ ಗೋಡ್ಸೆ: ಏಕ್ ಯುದ್ಧ್’ ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿದ ಜನರ ಗುಂಪೊಂದು ಥಿಯೇಟರ್ ಪರದೆ ಎದುರು ಪ್ರತಿಭಟನೆ ನಡೆಸಿತು. ಮಹಾತ್ಮ ಗಾಂಧಿ ಪರವಾಗಿ, ನಾಥೂರಾಂ ಗೋಡ್ಸೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ತ್ರಿವರ್ಣ ಧ್ವಜವನ್ನು ಹಾರಿಸಿ ನಿರ್ದೇಶಕರ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಚಿತ್ರವು ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸುತ್ತದೆ ಮತ್ತು ಮಹಾತ್ಮ ಗಾಂಧಿಯವರ ಪರಂಪರೆಗೆ ಅಗೌರವವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜನವರಿ 30, 1948 ರಂದು ಗಾಂಧಿಯನ್ನು ಹತ್ಯೆಗೈದ ವ್ಯಕ್ತಿಯಾಗಿದ್ದ ಗೋಡ್ಸೆಯನ್ನು ನಿರ್ದೇಶಕ ಸಂತೋಷಿ ಅವರು ಚಿತ್ರದ ಮೂಲಕ ವೈಭವೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಪ್ರತಿಭಟನಾಕಾರರು ಮಾಧ್ಯಮದವರ ನಡುವೆಯೇ ಕುಳಿತುಕೊಂಡಿದ್ದು, ಚಿತ್ರದ ಟ್ರೇಲರ್‌ ತೆರೆ ಕಂಡ ಕೂಡಲೇ ಪರದೆ ಮುಂಭಾಗದಲ್ಲಿ ಜಮಾಯಿಸಿ ಮಹಾತ್ಮಾ ಗಾಂಧಿ ಜಿಂದಾಬಾದ್‌ ಎಂಬ ಘೋಷಣೆಗಳನ್ನು ಕೂಗಿದರು. ಕೆಲವರು ಕಪ್ಪು ಪಟ್ಟಿ ಪ್ರದರ್ಶಿಸಿದರು. ಪ್ರತಿಭಟನೆ ಜೋರಾಗ್ತಿದ್ದಂತೆ ಪೊಲೀಸರು ಅವರನ್ನು ಹೊರಗೆ ಕಳಿಸಿದರು.

ನಂತರ ಪತ್ರಿಕಾ ಪ್ರಕಟಣೆಯ ಮೂಲಕ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ಸಂತೋಷಿ, “ಜನರು ಚಿತ್ರವನ್ನು ಒಮ್ಮೆ ನೋಡಿದ ನಂತರ, ನನ್ನ ಚಿತ್ರದ ಮೂಲಕ ನಾನು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ನಾನು ನನ್ನ ಚಲನಚಿತ್ರಗಳಲ್ಲಿ ಎರಡೂ ಐತಿಹಾಸಿಕ ಪಾತ್ರಗಳಿಗೆ ಸಮಾನವಾಗಿ ಪ್ರಾಮುಖ್ಯತೆ ನೀಡಿದ್ದೇನೆ” ಎಂದು ಹೇಳಿದರು. ಚಿತ್ರವು ಗೋಡ್ಸೆಯನ್ನು ಯಾವುದೇ ರೀತಿಯಲ್ಲಿ ವೈಭವೀಕರಿಸುವುದಿಲ್ಲ ಎಂದು ಅವರು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...