alex Certify ಕುಚೇಷ್ಠೆ ಮಾಡಲು ಹೋಗಿ ಕಪಾಳಮೋಕ್ಷ ಮಾಡಿಸಿಕೊಂಡ ಯೂಟ್ಯೂಬರ್​: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಚೇಷ್ಠೆ ಮಾಡಲು ಹೋಗಿ ಕಪಾಳಮೋಕ್ಷ ಮಾಡಿಸಿಕೊಂಡ ಯೂಟ್ಯೂಬರ್​: ವಿಡಿಯೋ ವೈರಲ್

ಯೂಟ್ಯೂಬರ್​ಗಳು ತಮ್ಮ ವಿಡಿಯೋಗಳನ್ನು ಹೆಚ್ಚೆಚ್ಚು ಜನ ನೋಡಬೇಕು ಎನ್ನುವ ಉದ್ದೇಶದಿಂದ ಬಹಳ ಸರ್ಕಸ್​ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅದು ಅಪಾಯಕಾರಿಯೂ ಆಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತರನ್ನು ಯೂಟ್ಯೂಬರ್ ಚೇಷ್ಟೆ ಮಾಡಿ ಪೇಚಿಗೆ ಸಿಲುಕಿರುವುದನ್ನು ವೈರಲ್​ ವಿಡಿಯೋದಲ್ಲಿ ನೋಡಬಹುದು. ವಿಡಿಯೋದಲ್ಲಿ ಯೂಟ್ಯೂಬರ್ ಪಾದಚಾರಿಗಳ ಹಿಂದೆ ನಡೆದುಕೊಂಡು ಹೋಗಿ ಹಾರ್ನ್​ ಅನ್ನು ಕಿವಿಯಲ್ಲಿ ಊದುತ್ತಾನೆ.
ಆದರೆ ವ್ಯಕ್ತಿಯೊಬ್ಬನಿಗೆ ಹೀಗೆಯೇ ಮಾಡಿದಾಗ ಮಾತ್ರ ಯೂಟ್ಯೂಬರ್​ ಗ್ರಹಚಾರ ನೆಟ್ಟಗಿರಲಿಲ್ಲ. ಆ ವ್ಯಕ್ತಿ, ಕೋಪದ ಭರದಲ್ಲಿ, ಯೂಟ್ಯೂಬರ್​ಗೆ ಕಪಾಳಮೋಕ್ಷ ಮಾಡಿದ್ದು ಅದೀಗ ವೈರಲ್​ ಆಗಿದೆ.

ಆ ವ್ಯಕ್ತಿ ಯೂಟ್ಯೂಬರ್‌ಗೆ ಕಪಾಳಮೋಕ್ಷ ಮಾಡುವ ಮೊದಲು ಆತನ ಮೇಲೆ ಹಲ್ಲೆ ನಡೆಸುತ್ತಾನೆ. ನಂತರ ಯೂಟ್ಯೂಬರ್​ ಸ್ನೇಹಿತ ರಕ್ಷಣೆಗೆ ಬಂದು ಆಗುವ ಅನಾಹುತ ತಪ್ಪಿಸುತ್ತಾನೆ. ಈ ವಿಡಿಯೋ ಹೆಚ್ಚೆಚ್ಚು ಶೇರ್​ ಆಗಿದ್ದು, ಯೂಟ್ಯೂಬರ್​ ಆಸೆ ಈಡೇರಿದೆ. ಆದರೆ ಕಪಾಳಮೋಕ್ಷ ಮಾಡಿಕೊಂಡ ನೋವು ಮಾತ್ರ ಇನ್ನೂ ಇದ್ದಂತಿದೆ!

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...