ಮದುವೆ ಇತ್ಯಾದಿ ಸಮಾರಂಭಗಳಲ್ಲಿ ನೃತ್ಯಕ್ಕೆ ಇರುವಷ್ಟು ಪ್ರಾಶಸ್ತ್ಯ ಸದ್ಯ ಎಲ್ಲಿಯೂ ಇಲ್ಲ. ಇದು ಎಲ್ಲಾ ದೇಶಗಳಲ್ಲಿಯೂ ಮಾಮೂಲು. ಪಾಕಿಸ್ತಾನದ ಯುವತಿಯೊಬ್ಬಳು ಬಾಲಿವುಡ್ ಹಾಡಿಗೆ ನರ್ತಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸುತ್ತಿದೆ.
ಲತಾ ಮಂಗೇಶ್ಕರ್ ಅವರ ‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಮದುವೆ ಸಮಾರಂಭದಲ್ಲಿ ಲಾಹೋರ್ ಮೂಲದ ಹುಡುಗಿ ಆಯೇಷಾ ನೃತ್ಯ ಮಾಡಿದ್ದಾಳೆ. ಆಕೆಯ ಅಭಿನಯದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ವೈರಲ್ ಆಗಿದೆ. ಆಕೆಯ ನೃತ್ಯಕ್ಕೆ ಹಿಂದೆ ಕುಳಿತವರೆಲ್ಲವೂ ಮನಸೋತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಆನ್‌ಲೈನ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ 40 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಹಿಂದಿ ಹಾಡಿಗೆ ಯಾವ ಬಾಲಿವುಡ್ ಹೀರೋಯಿನ್ಗೂ ಕಡಿಮೆ ಇಲ್ಲದಂತೆ ನರ್ತಿಸಿರುವಿರಿ ಎಂದು ಭಾರತದ ನೆಟ್ಟಿಗರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.