alex Certify ಘಟಿಕೋತ್ಸವ ಭಾಷಣ ಮಾಡುವಾಗ ಪಾಕ್ ಸಚಿವರಿಂದ ಕೆಟ್ಟ ಪದ ಬಳಕೆ; ನೆಟ್ಟಿಗರಿಂದ ಕ್ಲಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಘಟಿಕೋತ್ಸವ ಭಾಷಣ ಮಾಡುವಾಗ ಪಾಕ್ ಸಚಿವರಿಂದ ಕೆಟ್ಟ ಪದ ಬಳಕೆ; ನೆಟ್ಟಿಗರಿಂದ ಕ್ಲಾಸ್

ಪಾಕಿಸ್ತಾನದ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವ ರಾಣಾ ತನ್ವೀರ್ ಹುಸೇನ್ ಅವರು ಲಾಹೋರ್‌ನ ಸರ್ಕಾರಿ ಕಾಲೇಜು ವಿಶ್ವವಿದ್ಯಾನಿಲಯದಲ್ಲಿ (ಜಿಸಿಯು) ಘಟಿಕೋತ್ಸವದಲ್ಲಿ ಭಾಷಣ ಮಾಡುವಾಗ ಅನುಚಿತ ಭಾಷೆ ಬಳಸಿ ಬಳಿಕ ಕ್ಷಮೆಯಾಚಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಸಚಿವರು ಘಟಿಕೋತ್ಸವದಲ್ಲಿ ಭಾಗವಹಿಸಿದವರಿಗೆ ಧನ್ಯವಾದ ತಿಳಿಸುತ್ತಾ, ಒಮ್ಮೆ ಫೈಸಲಾಬಾದ್ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ರಾಣಾ ಇಕ್ರಾರ್ ಅವರನ್ನು ಭೇಟಿಯಾಗಿದ್ದರ ಬಗ್ಗೆ ಮಾತನಾಡುತ್ತಾ ಕೆಟ್ಟ ಪದ ಬಳಕೆ ಮಾಡಿದ್ದರು.

ಈ ವಿಡಿಯೋ ಆನ್‌ಲೈನ್‌ನಲ್ಲಿ ನೆಟಿಜನ್‌ಗಳ ಗಮನವನ್ನು ಸೆಳೆಯಿತು. ಸಮಾರಂಭದಲ್ಲಿ ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ಶಿಕ್ಷಣ ಸಚಿವರನ್ನು ನೆಟ್ಟಿಗರು ಕಟುವಾಗಿ ಟೀಕಿಸಿದರು.

ತರುವಾಯ, ರಾಣಾ ತನ್ವೀರ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಕ್ಷಮೆಯಾಚಿಸಿದರು. GC ವಿಶ್ವವಿದ್ಯಾಲಯ ಲಾಹೋರ್‌ನಲ್ಲಿ, ನನ್ನ ಭಾಷಣದ ಸಮಯದಲ್ಲಿ ನನಗೆ ಟಂಗ್ ಸ್ಲಿಪ್ ಆಗಿದೆ. ನಾನು ಅದರ ಬಗ್ಗೆ ವಿಷಾದಿಸುತ್ತೇನೆ ಮತ್ತು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಆದರೆ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಸಚಿವರನ್ನು ಕಟುವಾಗಿ ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...