alex Certify WATCH | ಸಂಪೂರ್ಣ ಹಿಮದಿಂದ ಮುಚ್ಚಿದ Oval ಕ್ರೀಡಾಂಗಣ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH | ಸಂಪೂರ್ಣ ಹಿಮದಿಂದ ಮುಚ್ಚಿದ Oval ಕ್ರೀಡಾಂಗಣ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ಚಳಿ, ಶೀತ ತೀವ್ರವಾಗಿದೆ. ಅಲ್ಲದೆ ಋತುಮಾನದ ಮೊದಲ ಹಿಮಪಾತ ಆರಂಭವಾಗಿದ್ದು, ಎಲ್ಲೆಡೆ ಬಿಳಿ ಹೊದಿಕೆಯನ್ನು ಹಾಸಿದಂತೆ ಕಾಣುತ್ತಿದೆ.

ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಐತಿಹಾಸಿಕ ಓವಲ್ ಕ್ರೀಡಾಂಗಣ ಸಂಪೂರ್ಣವಾಗಿ ಹಿಮದಿಂದ ಆವರಿಸಿದೆ.

ಇದರ ವಿಡಿಯೋವನ್ನು ಸರ್ರೆ ಕ್ರಿಕೆಟ್ ತಂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು, ಪಿಚ್ ಮಾತ್ರವಲ್ಲದೆ ಪ್ರೇಕ್ಷಕರ ಗ್ಯಾಲರಿ ಕೂಡಾ ಹಿಮದಿಂದ ತುಂಬಿಕೊಂಡಿದೆ.

ಇದರ ಮನೋಹರ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಂಡು ಆನಂದಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು, ತಾವೂ ಕೂಡ ಖುಷಿಯಿಂದ ಇದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...