alex Certify ಸಾರ್ವನಿಕರೇ ಗಮನಿಸಿ : ʻಇ- ಕೆವೈಸಿʼ ಮಾಡಿಸಿದರೆ ಮಾತ್ರ ʻಗ್ಯಾಸ್ ಸಬ್ಸಿಡಿʼ ಕೇವಲ ವದಂತಿ, ಆಹಾರ ಇಲಾಖೆ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವನಿಕರೇ ಗಮನಿಸಿ : ʻಇ- ಕೆವೈಸಿʼ ಮಾಡಿಸಿದರೆ ಮಾತ್ರ ʻಗ್ಯಾಸ್ ಸಬ್ಸಿಡಿʼ ಕೇವಲ ವದಂತಿ, ಆಹಾರ ಇಲಾಖೆ ಸ್ಪಷ್ಟನೆ

ಬೆಂಗಳೂರು :  ಗ್ಯಾಸ್ ಏಜೆನ್ಸಿಗಳಿಗೆ ದಿನಾಂಕ 31-12-2023ರ ಒಳಗಾಗಿ ಹೋಗಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಮತ್ತು ಸಿಲೆಂಡರ್ ಸರಬರಾಜು ಮಾಡಲಾಗುತ್ತದೆ ಮತ್ತು ಇ-ಕೆವೈಸಿ ಕಾರ್ಯಾಕ್ಕೆ ಹಣ ನೀಡಬೇಕೆಂಬ ವದಂತಿಯು ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಠಿಗೆ ಕಾರಣವಾಗಿದೆ. ಈ ವಿಷಯವು ಕೇವಲ ವದಂತಿಯಾಗಿದೆ ಎಂದು ಆಹಾರ ಇಲಾಖೆ ಸ್ಪಷ್ಠೀಕರಣ ನೀಡಿದ್ದಾರೆ.

ಅಡುಗೆ ಅನಿಲ ಗ್ರಾಹಕರು ತಮ್ಮ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅದು ಸಹ ಉಚಿತವಾಗಿ ನೀಡಬಹುದು. ಆದರೆ, ಕೇಂದ್ರ ಸರ್ಕಾರವು ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದಿಲ್ಲ. ಉಜ್ವಲ ಯೋಜನೆಯ ಗ್ಯಾಸ್ ಸಂಪರ್ಕ ಪಡೆದಿರುವವರು ಇ-ಕೆವೈಸಿ ಮೊದಲು ಆದ್ಯತೆಯಾಗಿ ನೀಡಬೇಕಾಗಿದೆ. ಉಳಿದಂತೆ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ ಸಂಖ್ಯೆ ದಾಖಲೆಯೊಂದಿಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಇ-ಕೆವೈಸಿ ನೀಡಬಹುದಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...