![](https://kannadadunia.com/wp-content/uploads/2023/07/IMG_LPG_BOTTLING_PLANT_I_2_1_4QASS318.jpg)
ಬೆಂಗಳೂರು : ಗ್ಯಾಸ್ ಏಜೆನ್ಸಿಗಳಿಗೆ ದಿನಾಂಕ 31-12-2023ರ ಒಳಗಾಗಿ ಹೋಗಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಮತ್ತು ಸಿಲೆಂಡರ್ ಸರಬರಾಜು ಮಾಡಲಾಗುತ್ತದೆ ಮತ್ತು ಇ-ಕೆವೈಸಿ ಕಾರ್ಯಾಕ್ಕೆ ಹಣ ನೀಡಬೇಕೆಂಬ ವದಂತಿಯು ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಠಿಗೆ ಕಾರಣವಾಗಿದೆ. ಈ ವಿಷಯವು ಕೇವಲ ವದಂತಿಯಾಗಿದೆ ಎಂದು ಆಹಾರ ಇಲಾಖೆ ಸ್ಪಷ್ಠೀಕರಣ ನೀಡಿದ್ದಾರೆ.
ಅಡುಗೆ ಅನಿಲ ಗ್ರಾಹಕರು ತಮ್ಮ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅದು ಸಹ ಉಚಿತವಾಗಿ ನೀಡಬಹುದು. ಆದರೆ, ಕೇಂದ್ರ ಸರ್ಕಾರವು ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದಿಲ್ಲ. ಉಜ್ವಲ ಯೋಜನೆಯ ಗ್ಯಾಸ್ ಸಂಪರ್ಕ ಪಡೆದಿರುವವರು ಇ-ಕೆವೈಸಿ ಮೊದಲು ಆದ್ಯತೆಯಾಗಿ ನೀಡಬೇಕಾಗಿದೆ. ಉಳಿದಂತೆ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ ಸಂಖ್ಯೆ ದಾಖಲೆಯೊಂದಿಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಇ-ಕೆವೈಸಿ ನೀಡಬಹುದಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://kannadadunia.com/wp-content/uploads/2023/12/WhatsApp-Image-2023-12-29-at-4.41.26-AM.jpeg)