alex Certify ಜಾಲತಾಣದಲ್ಲಿ ಚಿಂದಿ ಉಡಾಯಿಸಿದ ನಾರ್ವೇಯನ್​ ತಂಡ: ಹೊಸ ಟ್ವಿಸ್ಟ್​ ನೊಂದಿಗೆ ನೃತ್ಯದ ಮೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲತಾಣದಲ್ಲಿ ಚಿಂದಿ ಉಡಾಯಿಸಿದ ನಾರ್ವೇಯನ್​ ತಂಡ: ಹೊಸ ಟ್ವಿಸ್ಟ್​ ನೊಂದಿಗೆ ನೃತ್ಯದ ಮೋಡಿ

ನಾರ್ವೇಯನ್ ನೃತ್ಯ ಗುಂಪಾಗಿರುವ “ದಿ ಕ್ವಿಕ್ ಸ್ಟೈಲ್”, ಕೆಲವು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ‘ಬಾರ್ ಬಾರ್ ದೇಖೋ’ ಚಿತ್ರದಿಂದ ಬಾದ್‌ಶಾ ಅವರ ‘ಕಾಲಾ ಚಷ್ಮಾ’ಗೆ ಹಾಡಿನ ನೃತ್ಯ ಮಾಡುವ ಮೂಲಕ ಈ ಗುಂಪು ಚಿಂದಿ ಉಡಾಯಿಸಿದೆ. ರಾತ್ರೋರಾತ್ರಿ ಸಾಮಾಜಿಕ ಜಾಲತಾಣದ ಸ್ಟಾರ್​ ಆಗಿ ಮಿಂಚಿದೆ.

ಇದು ಕೆಲವು ದಿನಗಳ ಹಿಂದಿನ ಮಾತಾಯಿತು. ಇದಾದ ಬಳಿಕ ಈಗ, ಇದೇ ಗುಂಪು ಮತ್ತೆ ಅದೇ ಬಾಲಿವುಡ್ ಹಾಡಿನಲ್ಲಿ ನರ್ತಿಸಿದೆ. ಆದರೆ ಈ ಬಾರಿ ಹಿಂದಿನ ನೃತ್ಯದಂತೆ ಇಲ್ಲ. ಆದರೆ ಹಲವು ಟ್ವಿಸ್ಟ್‌ನೊಂದಿಗೆ ತಮ್ಮ ನೃತ್ಯದ ಮೂಲಕ ಸಾಮಾಜಿಕ ಜಾಲತಾಣಿಗರನ್ನು ಆಕರ್ಷಿಸಿದೆ.

ಇನ್​ಸ್ಟಾಗ್ರಾಂನಲ್ಲಿ ಈ ನೃತ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ತಂಡದ ಸದಸ್ಯರಲ್ಲಿ ಒಬ್ಬರು ತಮ್ಮ ಸಿಗ್ನೇಚರ್ ಶೈಲಿಯಲ್ಲಿ ನೃತ್ಯವನ್ನು ಪ್ರಾರಂಭಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಇದೊಂದು ರೀತಿಯಲ್ಲಿ ವಿಶೇಷ ಎಂದು ಗೋಚರಿಸುತ್ತದೆ. ದಿ ಕ್ವಿಕ್ ಸ್ಟೈಲ್ ಕೇವಲ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದು ಒಂದೇ ದಿನದಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...