alex Certify ’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌….!

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುವುದೆಂದರೆ ಡ್ಯಾನ್ಸ್ ರೀಲ್ಸ್‌ಗಳು. ಅದರಲ್ಲೂ ’ನಾಟು ನಾಟು’ ಅಥವಾ ’ಕಾಮ್‌ ಡೌನ್’ ಹಾಡಿನ ರೀಲ್ಸ್‌ಗಳಂತೂ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ.

’ಡ್ಯಾನ್ಸಿಂಗ್ ಪೇದೆ’ ಎಂದೇ ಖ್ಯಾತರಾಗಿರುವ ಮುಂಬೈನ ಅಮೋಲ್ ಕಾಂಬ್ಳೆ, ಸೆಲೆನಾ ಗೊಮೆಜ಼್‌ರ ಬೀಟ್ ’ಕಾಮ್‌ ಡೌನ್‌’ಗೆ ಹೆಜ್ಜೆ ಹಾಕುತ್ತಿರುವ ಇನ್‌ಸ್ಟಾಗ್ರಾಂ ರೀಲ್ ಒಂದು ಭಾರೀ ಸಂಚಲನ ಸೃಷ್ಟಿಸಿದೆ. ಈ ಹಾಡಿಗೆ ಪೊಲೀಸಪ್ಪ ಭರ್ಜರಿ ಹೆಜ್ಜೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ರೀಲ್ಸ್‌ಗೆ ಅದಾಗಲೇ ಸಾವಿರಾರು ಲೈಕ್ಸ್‌ಗಳು ಸಂದಾಯವಾಗಿದ್ದು, 14 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಕಾಂಬ್ಳೆರ ಅದ್ಭುತ ಪಾದಚಲನೆ ಹಾಗೂ ದೇಹ ನುಲಿಸುವ ಶೈಲಿಗೆ ನೆಟ್ಟಿಗರು ಫಿದಾ ಆಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಗಸ್ಟ್‌ 25, 2022ರಲ್ಲಿ ಬಿಡುಗಡೆಯಾದ ಈ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...