alex Certify Watch: ಮಾರ್ಪಡಿಸಿದ ಯಮಹಾ ಓಡಿಸಿದ ಎಂ.ಎಸ್​. ಧೋನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch: ಮಾರ್ಪಡಿಸಿದ ಯಮಹಾ ಓಡಿಸಿದ ಎಂ.ಎಸ್​. ಧೋನಿ

ನೀವು ಕ್ರಿಕೆಟ್ ಮತ್ತು ಆಟೋಮೊಬೈಲ್ ಉತ್ಸಾಹಿಯಾಗಿದ್ದರೆ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಖಂಡಿತವಾಗಿಯೂ ಕೇಳೇ ಇರುತ್ತೀರಾ. ಈ ಕ್ರಿಕೆಟಿಗನಿಗೆ ಕ್ರಿಕೆಟ್​ ಮಾತ್ರವಲ್ಲದೇ ಎಲ್ಲಾ ರೀತಿಯ ವಿಂಟೇಜ್ ಮತ್ತು ಆಧುನಿಕ ಮೋಟಾರ್‌ ಸೈಕಲ್‌ಗಳ ಕ್ರೇಜ್​ ಕೂಡ ಇದೆ. ಅವರ ಸಂಗ್ರಹದಲ್ಲಿ ಹಲವು ಇಂಥ ವಾಹನಗಳನ್ನು ನೋಡಬಹುದು.

ಅದರಲ್ಲಿಯೂ ಧೋನಿ ಅವರಿಗೆ ವಿಶೇಷವಾಗಿ ಯಮಹ RD350 ಮೇಲೆ ಬಹಳ ಪ್ರೀತಿ. ಈ ವರ್ಷದ ಆರಂಭದಲ್ಲಿ ಅವರು ತಮ್ಮ ಸಂಗ್ರಹಕ್ಕೆ ಯಮಹ RD350LC ಸೇರಿಸಿಕೊಂಡಿದ್ದಾರೆ. ಇದು ಚಂಡೀಗಢ ಮೂಲದ ಬ್ಲೂ ಸ್ಮೋಕ್ ಕಸ್ಟಮ್ಸ್‌ನಿಂದ ಮರುಸ್ಥಾಪಿಸಲ್ಪಟ್ಟ ಮತ್ತು ಮಾರ್ಪಡಿಸಿದ ಬೈಕ್​ ಆಗಿದೆ.

ಇದೇ ಮೊದಲ ಬಾರಿಗೆ ಧೋನಿ ಈ ಬೈಕ್​ ಸವಾರಿ ಮಾಡುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರ ಮನೆಯ ಹೊರಗೆ ವಿಡಿಯೋ ತೆಗೆಯಲಾಗಿದೆ. ಧೋನಿಯವರ ಬೈಕ್​ ಸವಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...