alex Certify ಅಭಿಮಾನಿಯೊಂದಿಗೆ ಸರಳತೆ ಮೆರೆದ ಎಂಎಸ್​ ಧೋನಿ: ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಯೊಂದಿಗೆ ಸರಳತೆ ಮೆರೆದ ಎಂಎಸ್​ ಧೋನಿ: ವೈರಲ್​ ಆಯ್ತು ವಿಡಿಯೋ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಪ್ಟನ್​ ಕೂಲ್​ ಎಂಎಸ್​ಧೋನಿ ಅಭಿಷೇಕ್​ ಕೆರ್ಕೆಟ್ಟಾ ಎಂಬ ಅದಷ್ಟಶಾಲಿ ವ್ಯಕ್ತಿಯ BMW 740i ಕಾರಿನೊಳಗೆ ಕುಳಿತು ಆಟೋಗ್ರಾಫ್​ ನೀಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು. ಎಂಎಸ್​ ಧೋನಿ ಸರಳತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.
.
ಅಭಿಷೇಕ್​ ಕೆರ್ಕೆಟ್ಟಾ ಜಿಮ್​ನಲ್ಲಿ ಧೋನಿ ಜೊತೆಗೆ ಸಂವಾದ ನಡೆಸುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ವೈರಲ್​ ಆಗುತ್ತಿದೆ. ಧೋನಿ ಅಭಿಮಾನಿಗಳು ಹಾಗು ಕ್ರಿಕೆಟ್​ ಪ್ರಿಯರು ಧೋನಿಯ ಸರಳತೆಗೆ ವ್ಹಾವ್​ ಎನ್ನುತ್ತಿದ್ದಾರೆ.

ತಮ್ಮ ಅಭಿಮಾನಿಗಳ ಜೊತೆ ಧೋನಿ ಎಷ್ಟು ಸರಳತೆಯಿಂದ ವರ್ತಿಸುತ್ತಾರೆ ಎಂಬ ಮೆಚ್ಚುಗೆಯ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಅನೇಕರು ಈ ರೀತಿ ಧೋನಿಯಿಂದ ಆಟೋಗ್ರಾಫ್​ ಪಡೆದುಕೊಳ್ಳುವ ಭಾಗ್ಯ ನಮಗೆ ಯಾವಾಗ ಸಿಗುತ್ತೋ ಅಂತಾ ಕೇಳಿಕೊಳ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...