alex Certify ಟೇಬಲ್​ ಕ್ಲಾತ್​ ಡ್ರೆಸ್​ ನಲ್ಲಿ ಕಂಗೊಳಿಸಿದ ರೂಪದರ್ಶಿ….! ಬಟ್ಟೆ ಮೇಲಿತ್ತು ತಿಂದುಬಿಟ್ಟ ಪ್ಲೇಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೇಬಲ್​ ಕ್ಲಾತ್​ ಡ್ರೆಸ್​ ನಲ್ಲಿ ಕಂಗೊಳಿಸಿದ ರೂಪದರ್ಶಿ….! ಬಟ್ಟೆ ಮೇಲಿತ್ತು ತಿಂದುಬಿಟ್ಟ ಪ್ಲೇಟ್

ಪ್ಯಾರೀಸ್​: ಫ್ಯಾಶನ್ ಷೋ ಗಳು ಎಂದರೆ ಅಲ್ಲಿ ಚಿತ್ರ ವಿಚಿತ್ರ ಬಟ್ಟೆಗಳು ನೋಡಲು ಸಿಗುತ್ತವೆ. ಅಂಥದ್ದೇ ವಿಚಿತ್ರ ಉಡುಗೆಯ ವಿಡಿಯೋ ಒಂದು ವೈರಲ್​ ಆಗಿದೆ.

ಪ್ಯಾರಿಸ್‌ನಲ್ಲಿ ಶಿಯಾಪರೆಲ್ಲಿಯ ಕೌಚರ್ ರನ್‌ವೇಯಲ್ಲಿ ನಡೆದ ಫ್ಯಾಷನ್​ ಷೋ ಇದಾಗಿದೆ. ಸಿಂಹದ ತಲೆಯಿರುವ ಉಡುಗೆಯೊಂದು ತೊಟ್ಟಿರುವ ರೂಪದರ್ಶಿ ಕೈಲೀ ಜೆನ್ನರ್ ಅವರ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು. ಆದರೆ ಇದೀಗ ಅದಕ್ಕೂ ವಿಚಿತ್ರ ಎನಿಸುವ ಬಟ್ಟೆಯೊಂದರ ವಿಡಿಯೋ ವೈರಲ್​ ಆಗಿದೆ.

ಡಿಸೈನರ್ ನಾನ್ನಾ ಮತ್ತು ಸೈಮನ್ ಎನ್ನುವವರು ಕೋಪನ್ ಹೇಗನ್ ಫ್ಯಾಶನ್ ವೀಕ್‌ನಲ್ಲಿ ವಿಚಿತ್ರವಾಗಿ ಡಿಸೈನ್​ ಮಾಡಿರುವ ಡ್ರೆಸ್​ ಇದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಇದರ ವಿಡಿಯೋ ವೈರಲ್​ ಅಗಿದೆ. ವೀಡಿಯೊದಲ್ಲಿ, ರೂಪದರ್ಶಿ ಸಾರಾ ಡಹ್ಲ್ ಇತರ ಅತಿಥಿಗಳೊಂದಿಗೆ ಮೇಜಿನ ಬಳಿ ಕುಳಿತಿರುವುದನ್ನು ನೋಡಬಹುದು. ನಂತರ ಆಕೆ ವೈನ್​ ಗ್ಲಾಸ್​ಮೇಲೆ ಚಮಚದಿಂದ ಕುಟ್ಟಿ ಎಲ್ಲರ ಗಮನ ಸೆಳೆಯುತ್ತಾಳೆ.

ಕೂಡಲೇ ಕ್ಯಾಟ್​ ವಾಕ್​ ಮಾಡುತ್ತಾ ಹೋಗುತ್ತಾಳೆ. ಆಕೆಯ ಡ್ರೆಸ್ ಟೇಬಲ್​ ಕ್ಲಾತ್​ನಿಂದ ಮಾಡಿದ್ದು. ಅದರ ಹಿಂಭಾಗದಲ್ಲಿ ಅರ್ಧ-ತಿನ್ನಲಾದ ಆಹಾರದ ತಟ್ಟೆಗಳು, ಮೇಣದಬತ್ತಿ, ಸಿಗರೇಟ್ ತುಂಡುಗಳು ಮತ್ತು ವೈನ್ ಗ್ಲಾಸ್ ಕಲೆಗಳು ಇರುವುದನ್ನು ನೋಡಬಹುದು. ಇದನ್ನು ನೋಡಿ ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟುವುದನ್ನು ಕೇಳಬಹುದು. ಇದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಕಣ್ಣಿನಿಂದ ಇನ್ನು ಏನೇನು ನೋಡಬೇಕೋ ಎನ್ನುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...