alex Certify ಹೈ ಹೀಲ್ಡ್​ ಚಪ್ಪಲಿ ಧರಿಸಿ ಅನಾಯಾಸವಾಗಿ ಫುಟ್​ಬಾಲ್​ ಆಡಿದ ಬಾಲಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈ ಹೀಲ್ಡ್​ ಚಪ್ಪಲಿ ಧರಿಸಿ ಅನಾಯಾಸವಾಗಿ ಫುಟ್​ಬಾಲ್​ ಆಡಿದ ಬಾಲಕಿ..!

ಹೈ ಹೀಲ್ಡ್ ಚಪ್ಪಲಿಯನ್ನ ಧರಿಸೋಕೆ ಅನೇಕರು ಕಷ್ಟ ಪಡ್ತಾರೆ. ಅಂತದ್ರಲ್ಲಿ ಮಿಜೋರಾಂನ ಬಾಲಕಿಯೊಬ್ಬಳು ಹೈ ಹೀಲ್ಡ್​ ಧರಿಸಿ ಫುಟ್​ಬಾಲ್​ ಆಟವಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿರುವ ಕೀಪಿ ಊಪಿ ಚಾಲೆಂಜ್​​ನ ಭಾಗವಾಗಿ ಬಾಲಕಿ ಈ ಸಾಧನೆ ಮಾಡಿದ್ದಾಳೆ. 14 ವರ್ಷದ ಬಾಲಕಿ ಈ ವಿಡಿಯೋವನ್ನ ಇನ್​ಸ್ಟಾದಲ್ಲಿ ಶೇರ್​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಐಜಾವ್ಲ್​​​ನ ಕಿಂಡಿ ಎಂಬಾಕೆ ಈ ಕ್ವಾರಂಟೈನ್​ ಚಾಲೆಂಜ್​ನ್ನು ಕಪ್ಪು ಬಣ್ಣದ ಕಿಟನ್​ ಹೀಲ್ಸ್ ಧರಿಸಿ ಪೂರೈಸಿದ್ದಾಳೆ. ಇಷ್ಟುದ್ದದ ಹೀಲ್ಡ್​ ಚಪ್ಪಲಿಯಲ್ಲಿ ಬ್ಯಾಲೆನ್ಸ್ ಕಾಪಾಡಿದ ಬಾಲಕಿಯ ಸಾಧನೆ ನೆಟ್ಟಿಗರ ಹುಬ್ಬೇರಿಸಿದೆ. ಈಕೆ ಒಂದು ಬಾರಿಯೂ ಫುಟ್​ಬಾಲ್​ ನೆಲಕ್ಕೆ ತಾಗದಂತೆ ಚಾಲೆಂಜ್​​ ಪೂರ್ಣಗೊಳಿಸಿದ್ದಾಳೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಿಂಡಿ, ತಾನು ಸಾಕಷ್ಟು ರಾಜ್ಯ ಹಾಗೂ ದೇಶ ಮಟ್ಟದ ಫುಟ್​ಬಾಲ್​ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗಿದ್ದಾಗಿ ಹೇಳಿಕೊಂಡಿದ್ದಾಳೆ. 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆಗೆ ಫುಟ್​ಬಾಲ್​ ಫ್ಯಾಶನ್​ ಅಂತೆ. ಕಿಂಡಿ ತಂದೆಯೇ ಫುಟ್​ಬಾಲ್​ ಕೋಚ್​ ಆಗಿದ್ದು ಈಕೆಗೆ ಬಾಲ್ಯದಿಂದಲೇ ಫುಟ್​ಬಾಲ್​ ಆಟದ ತರಬೇತಿ ನೀಡಿದ್ದಾರೆ.

View this post on Instagram

A post shared by lãdybållër? (@cindycolney10)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...