alex Certify ತರಬೇತುದಾರನಿಗೆ ಶ್ವಾನ ವಿದಾಯ ಹೇಳಿದ ಪರಿ ಕಂಡು ನೆಟ್ಟಿಗರು ಭಾವುಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಬೇತುದಾರನಿಗೆ ಶ್ವಾನ ವಿದಾಯ ಹೇಳಿದ ಪರಿ ಕಂಡು ನೆಟ್ಟಿಗರು ಭಾವುಕ

ಶ್ವಾನಗಳು ಮನುಷ್ಯನನ್ನ ಹಚ್ಚಿಕೊಳ್ಳುವಷ್ಟರ ಮಟ್ಟಿಗೆ ಬಹುಶಃ ಮನುಷ್ಯನೂ ಮನುಷ್ಯನನ್ನ ಹಚ್ಚಿಕೊಳ್ಳಲ್ಲ ಎನಿಸುತ್ತೆ. ಚೀನಾದಲ್ಲೂ ಕೂಡ ಈ ಮಾತಿಗೆ ಸಾಕ್ಷಿಯೆಂಬಂತಹ ವಿಡಿಯೋವೊಂದು ವೈರಲ್​ ಆಗಿದೆ.

ಸುಮಾರು ಎರಡು ವರ್ಷಗಳ ತರಬೇತಿ ನೀಡಿದ್ದ ತರಬೇತುದಾರನ ನಿವೃತ್ತಿ ದಿನ ಮೂರು ವರ್ಷದ ಗೋಲ್ಡನ್​ ರಿಟ್ರೈವರ್​ ಶ್ವಾನ ಆತನಿಗೆ ವಿದಾಯ ಹೇಳಲು ನಿರಾಕರಿಸಿದ ರೀತಿ ಕಂಡು ಸಾಮಾಜಿಕ ಜಾಲತಾಣ ಫಿದಾ ಆಗಿದೆ.

ವಿಡಿಯೋದಲ್ಲಿ ನಿವೃತ್ತಿ ಪಡೆದ ತರಬೇತುದಾರ ಅಲ್ಲಿಂದ ಹೊರಡುತ್ತಿದ್ದಂತೆಯೇ ಶ್ವಾನ ಆತನ ಹಿಂದೆಯೇ ಓಡಿ ತಬ್ಬಿಕೊಂಡಿದೆ. ನಿವೃತ್ತ ತರಬೇತುದಾರನಿಗೆ ಸ್ಥಳದಿಂದ ಒಂದಿಂಚೂ ಕದಲಲು ಬಿಡದೇ ತನ್ನ ಪ್ರೀತಿಯನ್ನ ಹೊರಹಾಕಿದೆ. 41 ಸೆಕೆಂಡ್​ಗಳ ಈ ಕ್ಲಿಪ್​​ ಇಂಟರ್ನೆಟ್​ ಬಳಕೆದಾರರನ್ನ ಭಾವುಕರನ್ನಾಗಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...