alex Certify ಬೆರಗುಗೊಳಿಸುವಂತಿದೆ ಕಡಲ ಪಕ್ಷಿ ಗ್ಯಾನೆಟ್ ಬೇಟೆಯಾಡುವ ಹಳೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗುಗೊಳಿಸುವಂತಿದೆ ಕಡಲ ಪಕ್ಷಿ ಗ್ಯಾನೆಟ್ ಬೇಟೆಯಾಡುವ ಹಳೆ ವಿಡಿಯೋ

ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಅತ್ಯಂತ ಆಸಕ್ತಿದಾಯಕ ವಿಡಿಯೊಗಳು ಪ್ರಸ್ತುತಗೊಳ್ಳುತ್ತದೆ. ಇದೀಗ ಬೇಟೆಯಾಡುವ ವಿದ್ಯಮಾನವನ್ನು ತೋರಿಸುವ ವಿಡಿಯೊ ಟ್ವಿಟ್ಟರ್​ನಲ್ಲಿ ವೈರಲ್​ ಆಗಿದೆ, ಇದು ಮೀನುಗಳನ್ನು ತಿನ್ನಲು ಪಕ್ಷಿಗಳು ನೀರಿನೊಳಕ್ಕೆ ಹೇಗೆ ಧುಮುಕುತ್ತವೆ ಎಂಬುದನ್ನು ತೋರಿಸುತ್ತದೆ.

29 ಸೆಕೆಂಡ್​ ವಿಡಿಯೊವನ್ನು ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ “ರೆಗ್​ ಸ್ಯಾಡ್ಲರ್​” ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪ್ರಸ್ತುತ 14 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ವಿಡಿಯೊ, ಕೆನಡಾದ ಟ್ರಿನಿಟಿ ಕೊಲ್ಲಿಯಲ್ಲಿ ಮೀನು ಹಿಡಿಯಲು ಬಹುತೇಕ ಕಡಲ ಪಕ್ಷಿ ಗ್ಯಾನೆಟ್ಸ್​ನ ಹಿಂಡಿನದ್ದಾಗಿದೆ.

ಅವು ಸಮುದ್ರಕ್ಕೆ ಧುಮುಕುವುದು ಮಾತ್ರವಲ್ಲದೆ, ಕ್ಷಣಮಾತ್ರದಲ್ಲಿ ನೀರಿನಲ್ಲಿ ಕಣ್ಮರೆಯಾಗಿ ನಂತರ ತಮ್ಮ ಬೇಟೆಯೊಂದಿಗೆ ಮತ್ತೆ ಹೊರಹೊಮ್ಮುತ್ತವೆ. ಮೊದಲು ಒಂದು ಅಥವಾ ಎರಡು ಪಕ್ಷಿಗಳಿಂದ ಪ್ರಾರಂಭವಾಗುತ್ತದೆ ಏಕಕಾಲಕ್ಕೆ ಇಡೀ ಹಿಂಡು ಹಿಂಬಾಲಿಸುತ್ತದೆ.

ಟ್ರಿನಿಡಾಡ್​ ಕೊಲ್ಲಿ, ನ್ಯೂಫೌಂಡ್ಲ್ಯಾಂಡ್​, ಕೆನಡಾದಲ್ಲಿ ಈ ಕಡಲ ಪಕ್ಷಿ ಹೆಚ್ಚಾಗಿವೆ. ವಿಡಿಯೊದಲ್ಲಿ ತೋರಿಸಿರುವಂತೆಯೇ ಹಕ್ಕಿಗಳು ಡೈವ್​ ಸಾಮಾನ್ಯವಾಗಿ ಸಣ್ಣದಾಗಿರುವುದಿಲ್ಲ. ಮೀನುಗಳನ್ನು ಹುಡುಕಲು 72 ಅಡಿಗಳಷ್ಟು ಆಳಕ್ಕೆ ಧುಮುಕುತ್ತದೆ. ಅವುಗಳ ರೆಕ್ಕೆ ಮತ್ತು ಪಾದಗಳು ಹೆಚ್ಚಿನ ವೇಗದಲ್ಲಿ ಧುಮುಕಲು ಮತ್ತು ಆಳವನ್ನು ರೀಡ್​ ಮಾಡಲು ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...