alex Certify ಬೆಚ್ಚಿಬೀಳಿಸುವಂತಿದೆ ʼಸೆಲ್ಫಿʼ ತೆಗೆದುಕೊಳ್ಳಲು ಈತ ಮಾಡಿರುವ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ʼಸೆಲ್ಫಿʼ ತೆಗೆದುಕೊಳ್ಳಲು ಈತ ಮಾಡಿರುವ ಕಾರ್ಯ

ಈಗಿನ ಕಾಲದಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ರೂಢಿಯಾಗಿಬಿಟ್ಟಿದೆ. ಅದು ಸ್ನೇಹಿತರೊಂದಿಗೆ ಆನಂದಿಸುವಾಗ, ನಿದ್ರೆಯಿಂದ ಎದ್ದ ನಂತರ ಕ್ಲಿಕ್ಕಿಸುವುದು ಸಾಮಾನ್ಯ. ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸೆಲ್ಫಿ ಪ್ರದರ್ಶಿಸಲು ಯಾವುದೇ ಅವಕಾಶಗಳನ್ನು ಕಳೆದುಕೊಳ್ಳುವುದಿಲ್ಲ.

ಆದರೆ ಕೆಲಮೊಮ್ಮೆ, ಪ್ರತಿಯೊಂದು ಸ್ಥಳವು ಸೆಲ್ಫಿ ವಲಯವಲ್ಲ ಎಂಬುದನ್ನು ನಾವು ಮರೆತುಬಿಡುತ್ತೇವೆ. ಅಪಾಯಕಾರಿ ಸ್ಥಳಗಳಲ್ಲಿ ಜನರು ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿ ಅವಘಡಕ್ಕೆ ತುತ್ತಾಗುವ ಉದಾಹರಣೆ ದಿನ ನಿತ್ಯ ಸಿಗುತ್ತಿದೆ. ಕೆಲವು ಪ್ರದೇಶಗಳನ್ನು ಸೆಲ್ಫಿ ನಿಷೇಧಿತ ಪ್ರದೇಶವಾಗಿಯೂ ಗುರುತಿಸುವ ವಾತಾವರಣ ಸೃಷ್ಟಿಯಾಗಿದೆ.

ಇಷ್ಟೆಲ್ಲದರ ನಡುವೆ ಇತ್ತೀಚೆಗೆ ವ್ಯಕ್ತಿಯೊಬ್ಬ ಚಿರತೆಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ವಿಡಿಯೋಮೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವ್ಯಕ್ತಿಯ ಸೆಲ್ಫಿ ಗೀಳು ಎಷ್ಟು ಹೆಚ್ಚಿದೆ ಎಂದರೆ, ಆತ ಪ್ರಪಂಚದ ಅತ್ಯಂತ ವೇಗವಾಗಿ ಓಡುವ ಪ್ರಾಣಿಯೊಂದಿಗೆ ಫೋಟೋ ಕ್ಲಿಕ್ಕಿಸಲು ಹೆದರಲಿಲ್ಲ.

ಇದನ್ನು ನೋಡಿದವರಿಗೂ ಅಚ್ಚರಿಯಾಗುವುದಂತೂ ಖಚಿತ. ವೀಡಿಯೊವನ್ನು ಐಎಫ್​ಎಸ್​ ಅಧಿಕಾರಿ ಕ್ಲೆಮೆಂಟ್​ ಬೆನ್​ ಟ್ವಿಟರ್​ನಲ್ಲಿ ಹಂಚಿಕೊಂಡು “ಆಫ್ರಿಕನ್​ ಸೆಲ್ಫಿ…… ಚೀತಾ ಸ್ಟೈಲ್”​ ಎಂದು ಕಾಮೆಂಟ್​ ಮಾಡಿದ್ದಾರೆ.

25 ಸೆಕೆಂಡ್​ಗಳ ವೀಡಿಯೊದಲ್ಲಿ ಹೆಜ್ಜೆ ಹಾಕುತ್ತಾ ಸಫಾರಿ ವಾಹನವನ್ನು ನಿಧಾನವಾಗಿ ಸಮೀಪಿಸುತ್ತಿರುವ ಚಿರತೆಯ ದೃಶ್ಯದೊಂದಿಗೆ ಆರಂಭವಾಗುತ್ತದೆ. ಕಣ್ಣು ಮಿಟುಕಿಸುವಷ್ಟರಲ್ಲಿ, ಅದು ಕಾರಿನ ವಿಂಡ್​ಸ್ಕ್ರೀನ್​ಗೆ ಹಾರಿ, ಟಾಪ್​ ಮೇಲೆ ಮೇಲೆ ಏರುತ್ತದೆ. ನಂತರ ತೆರೆದ ಸನ್​ರೂಫ್​ನಲ್ಲಿ ವಿಶ್ರಾಂತಿ ಪಡೆಯುತ್ತದೆ. ಚಿರತೆಯ ಹಠಾತ್​ ನಡೆಗೆ ಪ್ರವಾಸಿಗರು ಮೂಕವಿಸ್ಮಿತರಾಗುತ್ತಾರೆ.

ವಾಹನದೊಳಗಿದ್ದ ಪ್ರವಾಸಿಗರ ಗುಂಪು ಚಿರತೆಯ ಚಿತ್ರಗಳನ್ನು ಹತ್ತಿರದಿಂದ ಕ್ಲಿಕ್ಕಿಸಲು ಪ್ರಾರಂಭಿಸಿತು. ಆದರೆ, ಸೆಲ್ಫಿ ಕ್ಲಿಕ್ಕಿಸಲು ಒಬ್ಬ ವ್ಯಕ್ತಿ ಸೀಟಿನಿಂದ ಹೊರಬಂದದ್ದು, ಚಿರತೆಯ ವಿರುದ್ಧ ಬೆನ್ನು ತಿರುಗಿಸಿ ಅಪಾಯಕಾರಿ ಪ್ರಾಣಿಯೊಂದಿಗೆ ಸೆಲ್ಫಿ ಕ್ಲಿಕ್​ ಮಾಡುವುದನ್ನು ಮುಂದುವರೆಸಿದ. ಅದನ್ನು ನೋಡಲು ಮೈ ಝುಮ್ಮೆನಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...