![Viral video shows man throwing baskets of tomatoes into a truck](https://images.firstpost.com/wp-content/uploads/2022/10/Untitled-design-2022-10-20T110652.981.jpg?impolicy=website&width=1200&height=800)
ಕಠಿಣವಾದ ಕೆಲಸಗಳನ್ನು ಕೆಲವರು ತಮ್ಮ ಬುದ್ಧಿಮತ್ತೆಯಿಂದ ಅತ್ಯಂತ ಸುಲಭವಾಗಿಸಿಕೊಳ್ಳುತ್ತಾರೆ. ಹಾರ್ಡ್ ವರ್ಕ್ ಬದಲು ಸ್ಮಾರ್ಟ್ ವರ್ಕ್ ಮೂಲಕ ಇದನ್ನು ಸಾಧಿಸುತ್ತಾರೆ. ಇಂತಹ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಕೊಯ್ಲು ಮಾಡಿದ ತರಕಾರಿಗಳನ್ನು ಸಂಗ್ರಹಿಸಲು ನಿಲ್ಲಿಸಿದ್ದ ಟ್ರಕ್ ಗೆ ನೇರವಾಗಿ ಟೊಮೆಟೊ ಬುಟ್ಟಿಗಳನ್ನು ಹಾಕಿದ್ದಾನೆ. ಟ್ವಿಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೃಷಿ ಕಾರ್ಮಿಕರ ಗುಂಪು ಟೊಮೆಟೋ ಕೀಳುವ ಮತ್ತು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರೆ ಟ್ರಕ್ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಕೊಯ್ಲು ಮಾಡಿದ ಟೊಮೇಟೊಗಳನ್ನು ಜೋಡಿಸಿದ್ದಾನೆ. ಅದಕ್ಕಾಗಿ ಆತ ಕೌಶಲ್ಯವನ್ನು ಬಳಸಿದ್ದು, ಆ ಮೂಲಕ ತನ್ನ ಕೆಲಸವನ್ನು ಸುಲಭವಾಗಿಸಿಕೊಂಡಿದ್ದಾನೆ.