alex Certify ಸಿಂಹದ ಬಾಯೊಳಗೆ ಕೈಹಾಕಿ ಹುಚ್ಚು ಸಾಹಸ: ಮುಂದೆ ಆದದ್ದು ಭಯಾನಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹದ ಬಾಯೊಳಗೆ ಕೈಹಾಕಿ ಹುಚ್ಚು ಸಾಹಸ: ಮುಂದೆ ಆದದ್ದು ಭಯಾನಕ

ಕೆಲವರು ಹೆಚ್ಚು ಹೆಚ್ಚು ಲೈಕ್ಸ್​ ಪಡೆಯುವುದಕ್ಕೋ ಇಲ್ಲವೇ ಹುಚ್ಚುತನದಿಂದ ಅಪಾಯಕಾರಿ ಎನ್ನುವ ಸನ್ನಿವೇಶದಲ್ಲಿ ಸಿಲುಕುವುದು ಉಂಟು. ಅಂಥ ಒಂದು ಭಯಾನಕ ವಿಡಿಯೋ ವೈರಲ್​ ಆಗಿದೆ.

ಸಿಂಹದ ಜೊತೆ ಆಟವಾಡಲು ಹೋಗುವುದು ಅಥವಾ ಕುಚೇಷ್ಠೆ ಮಾಡುವುದು ಎಂದರೆ ಸುಮ್ಮನೆಯೇ? ಇದನ್ನು ತಿಳಿದೂ ತಿಳಿದೂ ವ್ಯಕ್ತಿಯೊಬ್ಬ ಸಾಹಸ ಮಾಡಲು ಹೋಗಿ ಪಡಬಾರದ ಕಷ್ಟ ಪಟ್ಟಿದ್ದು, ಜೀವ ಒಂದನ್ನು ಉಳಿಸಿಕೊಂಡಿದ್ದಾನಷ್ಟೇ. ಈ ಭಯಾನಕ ವಿಡಿಯೋ ನೋಡಿ ಜನರು ಈ ವ್ಯಕ್ತಿಯ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಡಿಯೊವನ್ನು ಫೆಬ್ರವರಿ 19 ರಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಿಂಹವನ್ನು ಇಟ್ಟಿರುವ ಪಂಜರದದ ಒಳಗೆ ಕೈಹಾಕಿದ್ದಾನೆ. ಆಗ ಸಿಂಹ ಪಕ್ಕನೆ ಕೈಯನ್ನು ಹಿಡಿದುಕೊಂಡಿದೆ. ವ್ಯಕ್ತಿ ಎಷ್ಟು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗದ್ದನ್ನು ವಿಡಿಯೋದಲ್ಲಿ ನೋಡಬಹುದು.

ಇಲ್ಲಿಗೆ ವಿಡಿಯೋ ಕಟ್​ ಆಗಿದೆ. ಆದರೆ ನಂತರ ಈ ವ್ಯಕ್ತಿಯ ಬೆರಳುಗಳು ಸಂಪೂರ್ಣ ಕಟ್​ ಆಗಿರುವುದಾಗಿ ಹೇಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 66 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...