ಈಗೀಗ ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡೋದೇ ಒಂದು ಟ್ರೆಂಡ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ ಪ್ರಪೋಸ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ಈಗ ಮತ್ತೊಂದು ವಿಡಿಯೋ ಸೇರಿದ್ದು ಆಕ್ಲೆಂಡ್ನ ನಿವಾಸಿಯಾಗಿರುವ ಬ್ಯಾಂಕಿಂಗ್ ತಜ್ಞ ಯಶರಾಜ್ ಚಾಬ್ರಾ ಎಂಬವರು ತಮ್ಮ ಗೆಳತಿ ರಿಯಾ ಶುಕ್ಲಾರಿಗೆ ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ಸಿನಿಮೀಯ ಶೈಲಿಯಲ್ಲಿ ಮದುವೆಗೆ ಪ್ರಪೋಸ್ ಮಾಡಿದ್ದಾರೆ.
ಆಗಸ್ಟ್ 18ರಂದು ಈ ರಮಣೀಯ ಘಟನೆ ನಡೆದಿದ್ದು ಪ್ರಸ್ತುತ ವಿಡಿಯೋ ವೈರಲ್ ಆಗಿದೆ. ಸಾವಿರಾರು ಜನರ ಸಮ್ಮುಖದಲ್ಲಿ ಯಶರಾಜ್, ರಿಯಾರ ಎದುರು ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ.
ಬಾಲಿವುಡ್ ಸಿನಿಮಾದಂತಿದ್ದ ಈ ಪ್ರಪೋಸ್ನ್ನು ಏರ್ಪೋರ್ಟ್ನಲ್ಲಿದ್ದವರು ವೀಕ್ಷಿಸಿದ್ದು ಮಾತ್ರವಲ್ಲದೇ ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾರೆ. ಏರ್ಪೋರ್ಟ್ನ ಸಿಬ್ಬಂದಿ ಈ ದೃಶ್ಯಾವಳಿಗಳನ್ನು ನೇರಪ್ರಸಾರ ಕೂಡ ಮಾಡಿದ್ದು ವಿಶೇಷವಾಗಿದೆ. ತನ್ನ ಗೆಳತಿ ಮರೆಯಲಾಗದ ರೀತಿಯಲ್ಲಿ ಆಕೆಯ ಎದುರು ಪ್ರೇಮ ನಿವೇದನೆ ಮಾಡೋದೇ ನನ್ನ ಗುರಿಯಾಗಿತ್ತು ಅಂತಾ ಚಾಬ್ರಾ ಹೇಳಿದ್ದಾರೆ.
ಆಕ್ಲೆಂಡ್ ಏರ್ಪೋರ್ಟ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಪ್ರೀತಿಯು ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿತ್ತು ಎಂದು ಈ ವಿಡಿಯೋಗೆ ಶೀರ್ಷಿಕೆ ಸಹ ನೀಡಲಾಗಿತ್ತು. ಅಲ್ಲದೇ ನಿಮ್ಮ ಅವಿಸ್ಮರಣೀಯ ಕ್ಷಣಕ್ಕೆ ನಮ್ಮನ್ನೂ ಒಂದು ಭಾಗ ಮಾಡಿಕೊಂಡ ರಿಯಾ ಹಾಗೂ ಚಾಬ್ರಾರಿಗೆ ಧನ್ಯವಾದ ಅಂತಾ ಸಹ ಬರೆಯಲಾಗಿದೆ.