ನ್ಯೂಯಾರ್ಕ್ನ ಟೈಮ್ ಸ್ಕ್ವೇರ್ನಲ್ಲಿ ವ್ಯಕ್ತಿಯೊಬ್ಬ ಭಾಂಗ್ರಾ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುಬೈ ಮೂಲದ ಭಾಂಗ್ರಾ ಡ್ಯಾನ್ಸರ್ ಮತ್ತು ಶಿಕ್ಷಕ ಹಾಡಿರ್ ಸಿಂಗ್ ಅವರು ಪ್ರಸ್ತುತ ತಮ್ಮ ಕಂಪನಿ ಪ್ಯೂರ್ ಭಾಂಗ್ರಾಕ್ಕಾಗಿ ವಿಶ್ವ ಪ್ರವಾಸದಲ್ಲಿದ್ದಾರೆ.
ಆಗಾಗ್ಗೆ ಭಾಂಗ್ರಾ ಸೆಮಿನಾರ್ಗಳು ಮತ್ತು ವರ್ಕ್ಶಾಪ್ಗಳನ್ನು ನೀಡುವ ಹಾಡಿರ್ ಸಿಂಗ್, ಇತ್ತೀಚೆಗೆ ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಪ್ರಸಿದ್ಧವಾದ ಟೈಮ್ ಸ್ಕ್ವೇರ್ನಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಪ್ರದಶಿರ್ಸಲು ನಿರ್ಧರಿಸಿದರು.
ಅವರು ಹಂಚಿಕೊಂಡ ಕ್ಲಿಪ್ನಲ್ಲಿ, ಜೀಬ್ರಾ ಕ್ರಾಸಿಂಗ್ನ ಮಧ್ಯದಲ್ಲಿ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದ್ದು, ಮುಂಡಿಯನ್ ತೋ ಬಾಚ್ ಕೆ ಬೀಟ್ಗಳಿಗೆ ಡ್ಯಾನ್ಸ್ ಮಾಡುವ ಸಿಂಗ್, ಎಲ್ಲಾ ಪ್ರೇಕ್ಷಕರ ಗಮನವನ್ನು ಸೆಳೆಯುವ ಮೂಲಕ ಸದ್ದು ಮಾಡುತ್ತಾರೆ.
ಹೌದು, ನಾನು ಟೈಮ್ಸ್ ಸ್ಕ್ವೇರ್ನಲ್ಲಿ ನೃತ್ಯ ಮಾಡಿದ್ದೇನೆ. ರಸ್ತೆಯ ಮಧ್ಯದಲ್ಲಿ. ಹೌದು, ನಾವು ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ. ಪರಿಪೂರ್ಣ ಶಾಟ್ಗಾಗಿ ನಾವು ಒಂದು ಗಂಟೆ ಕಾಯುತ್ತಿದ್ದೆವು. ಇದು ಸ್ಥಳದಲ್ಲೇ ಕೊರಿಯೊಗ್ರಾಪ್ ಆಗಿತ್ತು. ಅದು ಪಂಜಾಬಿ ಎಂಸಿ ಆಗಬೇಕಿತ್ತು. ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಅವರು ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ.
ಇದು ಅಂತರ್ಜಾಲದಲ್ಲಿ ಹಲವಾರು ಭಾಂಗ್ರಾ ಪ್ರೇಮಿಗಳ ಹೃದಯವನ್ನು ಗೆದ್ದಿದೆ. ಡ್ಯಾನ್ಸ್ ವಿಡಿಯೋ ಫೋಟೋ ಶೇರಿಂಗ್ ಅಪ್ಲಿಕೇಶನ್ನಲ್ಲಿ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.