alex Certify ಸಿಂಹದ ಪಂಜರದೊಳಗೆ ನುಗ್ಗುವ ಹುಚ್ಚು ಸಾಹಸ; ಬೆಚ್ಚಿಬೀಳಿಸುವಂತಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹದ ಪಂಜರದೊಳಗೆ ನುಗ್ಗುವ ಹುಚ್ಚು ಸಾಹಸ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಸಿಂಹಗಳ ಪಂಜರವನ್ನು ಪ್ರವೇಶಿಸುವ ಹುಚ್ಚು ಪ್ರದರ್ಶನ ಮಾಡಿ ಪ್ರಾಣ ಕಳೆದುಕೊಂಡ ಭಯಾನಕ ಘಟನೆಯ ವಿಡಿಯೋ ವೈರಲ್‌ ಆಗಿದೆ.

ಸುಮಿತ್_ವಿಷ್ಕರ್ಮ2 ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರ ಈ ಭೀಕರ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಿಂಹಗಳ ನಡುವೆ ಸಿಕ್ಕಿಬಿದ್ದಿರುವುದನ್ನು ಕಾಣಬಹುದು, ಅದು ಅವನ ಮೇಲೆ ದಾಳಿ ಮಾಡಿದೆ ಮತ್ತು ಅವನು ಅವುಗಳಿಂದ ತಪ್ಪಿಸಿಕೊಳ್ಳಲು ಆಗಿಲ್ಲ.

ಮನುಷ್ಯರ ಜೊತೆ ಹೇಗೆ ವರ್ತಿಸಬೇಕು ಎಂದು ಈ ಸಿಂಹಗಳಿಗೆ ತರಬೇತಿ ನೀಡಲಾಗಿತ್ತು. ಇದೇ ಧೈರ್ಯದೊಂದಿಗೆ ವ್ಯಕ್ತಿಯೊಬ್ಬ ಒಳಗೆ ಹೋಗಿದ್ದಾನೆ. ಆದರೆ ಸಿಂಹಗಳು ಭಯಗೊಂಡು ಒಂದೇ ಸಮನೆ ದಾಳಿ ಮಾಡಿದೆ. ಸಿಂಹದ ಪಂಜರದಲ್ಲಿ ಹೋದರೆ ಹೇಗಿರುತ್ತದೆ ಎಂದು ನೋಡುವ ಸಲುವಾಗಿ ಅಲ್ಲಿ ನೆರೆದವರು ಇದರ ವಿಡಿಯೋ ಮಾಡುತ್ತಿದ್ದರು. ಅದೀಗ ವೈರಲ್‌ ಆಗಿದೆ.

ಹುಚ್ಚು ಸಾಹಸ ಮಾಡುವ ಮುನ್ನ ಒಮ್ಮೆ ಯೋಚಿಸಿ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...