alex Certify ಮೈ ಝುಂ ಎನಿಸುತ್ತೆ ಚಲಿಸುತ್ತಿರುವ ರೈಲಿನೆದುರು ಈತ ಮಾಡಿದ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಝುಂ ಎನಿಸುತ್ತೆ ಚಲಿಸುತ್ತಿರುವ ರೈಲಿನೆದುರು ಈತ ಮಾಡಿದ ಕೃತ್ಯ

ರೈಲು ಚಲಿಸುತ್ತಿದ್ದ ಟ್ರ್ಯಾಕ್​​ನಲ್ಲಿಯೇ ವ್ಯಕ್ತಿಯೊಬ್ಬ ತನ್ನ ವಾಹನದೊಂದಿಗೆ ಸಾಹಸ ಮಾಡಲು ಹೋಗಿ ಆತನ ಬೈಕ್​​ ರೈಲಿನ ಅಡಿ ಸಿಲುಕಿದ ಘಟನೆಯೊಂದು ಗುಜರಾತ್​ನಲ್ಲಿ ನಡೆದಿದೆ.

ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡಿದ್ದ ಬೈಕ್ ಎಳೆಯಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿದ್ದ. ಆದರೆ ರೈಲು ಆತನ ಸಮೀಪಕ್ಕೆ ಬಂದಿದ್ದರೂ ಸಹ ಆತ ಮಾತ್ರ ಅದನ್ನ ಬಿಡದೇ ಅಲ್ಲೇ ಇದ್ದ. ಇನ್ನೇನು ರೈಲು ಆತನ ಮೈಮೇಲೆ ಹರಿಯಿತು ಅನ್ನೋವಷ್ಟರಲ್ಲಿ ಹಳಿಯಿಂದ ದೂರ ಸರಿದಿದ್ದಾನೆ, ಈ ಮೈ ಝುಂ ಎನ್ನಿಸುವ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ರೌಂಡ್​ ಹಾಕುತ್ತಿದೆ.

ಜಮ್ನಾಗರ್​ನ ಸಂಧ್ಯಾ ಬ್ರಿಡ್ಜ್​ ಎಂಬಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಈ ವ್ಯಕ್ತಿಯು ರೈಲ್ವೆ ಹಳಿಯ ಮೇಲೆ ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದ ಎಂದು ಹೇಳಿವೆ.

ರೈಲ್ವೆ ಹಳಿಯ ಮೇಲೆ ಬೈಕ್ ಚಲಾಯಿಸುವ ಪ್ರಯತ್ನದಲ್ಲಿದ್ದಾಗ ಬೈಕಿನ ಚಕ್ರ ಹಳಿಗಳ ಮಧ್ಯ ಸಿಲುಕಿಕೊಂಡಿದೆ. ಎಷ್ಟೇ ಪ್ರಯತ್ನಿಸಿದರೂ ಸಹ ಹಳಿಯಿಂದ ತಪ್ಪಿಸೋಕೆ ಆಗಿಲ್ಲ. ರೈಲು ಇನ್ನೇನು ಹತ್ತಿರ ಬಂತು ಅನ್ನೋವಾಗ ವ್ಯಕ್ತಿ ಬೈಕ್ ಬಿಟ್ಟು ಪಕ್ಕಕ್ಕೆ ಸರಿದಿದ್ದಾನೆ. ರೈಲು ವಾಹನವನ್ನ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ನಂತರ ಸ್ಟಾಪ್​ ಆಗಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಚಲಿಸುತ್ತಿದ್ದ ರೈಲಿನ ಎದುರು ಈ ರೀತಿ ಆಟವಾಡಿದ ವ್ಯಕ್ತಿಯ ಉದ್ಧಟತನಕ್ಕೆ ನೆಟ್ಟಿಗರು ಹಿಡಿಶಾಪ ಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...