alex Certify ಹಿಮಪಾತದಲ್ಲಿ ಸಿಲುಕಿದ್ರೂ ಬದುಕುಳಿದ ಪರ್ವತಾರೋಹಿ: ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಪಾತದಲ್ಲಿ ಸಿಲುಕಿದ್ರೂ ಬದುಕುಳಿದ ಪರ್ವತಾರೋಹಿ: ಭಯಾನಕ ವಿಡಿಯೋ ವೈರಲ್

Watch: Man Clings To Mountainside During Avalanche In Hair-Raising Videoಪರ್ವತಾರೋಹಿಯೊಬ್ಬರು ನೆಲದಿಂದ 400 ಅಡಿ ಎತ್ತರದಲ್ಲಿ ಹಿಮಪಾತವನ್ನು ಎದುರಿಸಿದಾಗ ಅವರು ಅನುಭವಿಸಿದ ಭಯಾನಕತೆಯನ್ನು ವಿವರವಾಗಿ ತೆರೆದಿಟ್ಟಿದ್ದಾರೆ.

ಹಿಮಪಾತವು ಲೆಲ್ಯಾಂಡ್ ನಿಸ್ಕಿಗೆ ಅಪ್ಪಳಿಸಿದಾಗ ಕೊಲೊರಾಡೋದ ಔರೆಯಲ್ಲಿ ಮೌಂಟ್ ದಿ ರಿಬ್ಬನ್ ನಲ್ಲಿ ಅವರು ಐಸ್ ಕ್ಲೈಂಬಿಂಗ್ ಮಾಡುತ್ತಿದ್ದರು. ಏಕಾಂಗಿಯಾಗಿದ್ದ ಅವರ ಬಳಿ ಹಗ್ಗ ಕೂಡ ಇರಲಿಲ್ಲ.

ಪ್ರಮುಖ ಹಿಮಕುಸಿತಗಳನ್ನು ಉಂಟುಮಾಡುವ ಮಾರ್ಗಗಳ ಬಗ್ಗೆ ತಿಳಿದಿದ್ದ ಅವರು, ಫೆಬ್ರವರಿ 8ರ ಬೆಳಗ್ಗೆ ಆರೋಹಣವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ನಂತರ ನಡೆದದ್ದು ಅವರ ಜೀವನದ ಅತ್ಯಂತ ಭಯಾನಕ ಅನುಭವಗಳಲ್ಲಿ ಒಂದಾಗಿದೆ. ತಮ್ಮ ಭಯಾನಕ ಕ್ಷಣದ ವಿಡಿಯೋವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಿಸ್ಕಿ ನೆಲದಿಂದ ಸುಮಾರು 400 ಅಡಿಗಳಷ್ಟು ಎತ್ತರದಲ್ಲಿದ್ದಾಗ ಮಂಜುಗಡ್ಡೆ ಅವರ ಮೇಲೆ ಅಪ್ಪಳಿಸಿದೆ. ಅಕ್ಷರಶಃ ಅವರು ಎರಡು ನಿಮಿಷಗಳ ಕಾಲ ಮಂಜುಗಡ್ಡೆಯ ಕೆಳಗೆ ಸಿಲುಕಿದ್ದರು. ಮಂಜುಗಡ್ಡೆ ಅಪ್ಪಳಿಸಿದಾಗ ಕೋಲಿನಂತಹ ಸಾಧವನವನ್ನು ಹಿಡಿದುಕೊಂಡಿದ್ದ ಅವರು ಗಟ್ಟಿಯಾಗಿ ನಿಲ್ಲಲು ಶ್ರಮ ಪಡುತ್ತಿದ್ದರು. ಮಂಜುಗಡ್ಡೆ ನಿಯಮಿತವಾಗಿ ಮೈಮೇಲೆ ಅಪ್ಪಳಿಸುತ್ತಿದ್ದರೂ ಭಯಪಡದ ಅವರು ಉಸಿರಾಟದ ಮೇಲೆ ಸಂಪೂರ್ಣ ಕೇಂದ್ರೀಕರಿಸಿದ್ರು. ಹೀಗಾಗಿ ತಾನು ಬದುಕಿ ಉಳಿಯುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...