alex Certify ಮೀನಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಖುಷಿಯಲ್ಲಿ ಮೊಬೈಲನ್ನೇ ನೀರಿಗೆಸೆದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಖುಷಿಯಲ್ಲಿ ಮೊಬೈಲನ್ನೇ ನೀರಿಗೆಸೆದ ಭೂಪ…!

ಒಮ್ಮೊಮ್ಮೆ ಈ ರೀತಿ ಆಗುವುದುಂಟು. ಕೈ ತಪ್ಪಿ ಕೈ ಕೈ ಹಿಸುಕಿಕೊಳ್ಳುವ ಅನೇಕ ಪ್ರಸಂಗಗಳು ಪ್ರತಿಯೊಬ್ಬರಿಗೂ ಆಗುತ್ತದೆ.

ಟ್ವಿಟರ್​ ಹ್ಯಾಂಡಲ್​ನಲ್ಲಿ ತನ್ಸು​ ಎಂಬುವರು ಸಾಮಾನ್ಯವಾಗಿ ರಂಜಿಸುವ ಮತ್ತು ತಮಾಷೆಯ ವೀಡಿಯೊಗಳನ್ನು ಪೋಸ್ಟ್​ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ಪೋಸ್ಟ್​ ಮಾಡಿದ ಮೀನಿನ ಜೊತೆಗಿನ ಸೆಲ್ಫಿ ಪೋಸ್ಟ್​ ನೆಟ್ಟಿಗರಿಗೆ ಖುಷಿತಂದಿದೆ.

ಮೋಟಾರು ದೋಣಿಯಲ್ಲಿದ್ದ ವ್ಯಕ್ತಿಯೊಬ್ಬ ಮೀನಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ವಿಡಿಯೋ ತೋರಿಸುತ್ತದೆ, ಆತ ನೀರಿನಿಂದ ಆಗ ತಾನೆ ಮೇಲೆತ್ತಿದ್ದ ಮೀನನ್ನು ಒಂದು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಬಳಿಕ ಆ ಮೀನಿನ ಜೊತೆಗೆ ಸೆಲ್ಫಿಯನ್ನೂ ತೆಗೆದುಕೊಳ್ಳುತ್ತಾರೆ. ಆದರೆ ನಂತರ ಆ ಖುಷಿಯಲ್ಲಿ ಒಂದು ಪ್ರಮಾದ ಎಸಗಿಬಿಟ್ಟ.

ಸೆಲ್ಫಿ ತೆಗೆದು ಮುಗಿಸಿದ ನಂತರ, ಮೀನನ್ನು ಮತ್ತೆ ನೀರಿಗೆ ಎಸೆಯುವ ಬದಲು ಅವನು ತನ್ನ ಫೋನ್​ ನೀರಿಗೆ ಎಸೆದಿದ್ದಾನೆ. ತನ್ನ ತಪ್ಪಿಗೆ ಭಾರೀ ಬೆಲೆ ತೆರಬೇಕಾದ ವ್ಯಕ್ತಿಗೆ ಇದು ಖಂಡಿತವಾಗಿಯೂ ವಿನೋದವಲ್ಲ. ಆದರೆ, ನೆಟ್ಟಿಗರು ಮಾತ್ರ ಖುಷಿಪಟ್ಟಿದ್ದಾರೆ.

ವೀಡಿಯೊವನ್ನು ಸಂರ್ಪೂಣವಾಗಿ ಸ್ಕ್ರಿಪ್ಟ್​ ಮಾಡಲಾಗಿದೆ ಮತ್ತು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದು, ಇಂತಹದೇ ಇನ್ನೊಂದು ವಿಡಿಯೋವನ್ನು ಉದಾಹರಣೆಯಾಗಿ ವಿವರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...