ಟೆಕ್ಸಾಸ್ನ ಹೂಸ್ಟನ್ನಲ್ಲಿ ಬಹುಕಾಲದಿಂದ ದೂರವಿದ್ದ ಒಡಹುಟ್ಟಿದವರು ಮತ್ತೆ ಒಂದಾಗಲು ಜೈವಿಕ ತಂತ್ರಜ್ಞಾನದ ಸಾಧನವು ಸಹಾಯ ಮಾಡಿರುವ ಅಚ್ಚರಿ ಸುದ್ದಿಯೊಂದಿದೆ.
ಇಬ್ಬರೂ ಕೆಲಕಾಲ ಪರಸ್ಪರ ಸಮೀಪದಲ್ಲಿಯೇ ಇದ್ದರು, ಆದರೆ ಒಡ ಹುಟ್ಟಿದವರೆಂಬ ಅರಿವಿರಲಿಲ್ಲ. ರೇಮಂಡ್ ಟರ್ನರ್ ಮತ್ತು ಕ್ರಿಸ್ಟಿನಾ ಸ್ಯಾಡ್ಬೆರಿ ಮೊದಲ ಬಾರಿಗೆ ಒಂದಾಗಿದ್ದು, ಅವರ ಎಣಿಸಲಾಗದ ಖುಷಿ ಎಂತವರಿಗೂ ಆಶ್ಚರ್ಯ ತರುತ್ತದೆ.
2015ರಲ್ಲಿ ಟರ್ನರ್ ಹೂಸ್ಟನ್ನಲ್ಲಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಿರ್ಮಾಪಕರಾಗಿ ಕೆಲಸ ಪಡೆದರು. ರೋಗಿಗಳು ತಮ್ಮ ಸ್ವಂತ ಸಂಗೀತವನ್ನು ರೆಕಾರ್ಡ್ ಮಾಡಬಹುದಾದ ಸ್ಟುಡಿಯೋವನ್ನು ಆಸ್ಪತ್ರೆಯ ಆವರಣದಲ್ಲಿ ನಿಮಿರ್ಸಲಾಗಿದೆ. ಅದೇ ಸಮಯದಲ್ಲಿ, ಏರ್ ಫೋರ್ಸ್ನಲ್ಲಿರುವ ಕ್ರಿಸ್ಟಿನಾ ತನ್ನ ನಾಲ್ಕು ವರ್ಷದ ಮಗ ಬ್ರೆಸನ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲು ಪ್ರಾರಂಭಿಸಿದಳು.
ಒಂದು ದಿನ, ಟರ್ನರ್ ಅವರ ಪತ್ನಿ ಮಾರಿಯಾ ಅವರು ಗೂಗಲ್ ಬೆಂಬಲಿತ ಕಂಪನಿ ಡಿಎನ್ಎ ಪರೀಕ್ಷಾ ಕಿಟ್ ಅನ್ನು ಖರೀದಿಸಿದ್ದು, ಅದನ್ನು ಬಳಕೆ ಮಾಡಿದಾಗ ಅದರ ಡೇಟಾ ಬೇಸ್ ಬೇರೆ ಡೇಟಾಬೇಸ್ನೊಂದಿಗೆ ಹೊಂದಿಕೆಯಾಗುತ್ತದೆ ಎಂದು ಆಕಸ್ಮಿಕವಾಗಿ ಪರಿಶೀಲಿಸಿದಾಗ ಟರ್ನರ್ ಕ್ರಿಸ್ಟಿನಾ ಜೊತೆ “ಕುಟುಂಬದ ಹೊಂದಾಣಿಕೆ, ಒಡಹುಟ್ಟಿದವರು” ಎಂಬುದನ್ನು ತೋರಿಸಿದೆ.
ಅನೇಕ ಬಾರಿ ಪರಸ್ಪರರು ಒಂದು ದಾರಿಯಲ್ಲಿ ಹಾದು ಹೋಗಿದ್ದರೂ ಅವರಿಬ್ಬರಿಗೆ ಯಾವುದೇ ಸುಳಿವು ಇರಲಿಲ್ಲ. ಮತ್ತೊಂದೆಡೆ, ಕ್ರಿಸ್ಟಿನಾ ಟರ್ನರ್ ಅನ್ನು “ಸ್ಟುಡಿಯೋದಲ್ಲಿ ಕೀಬೋರ್ಡ್ ನುಡಿಸುವ ವ್ಯಕ್ತಿ” ಎಂದು ತಿಳಿದಿದ್ದರಂತೆ.