ಮಕ್ಕಳು ಮುಗ್ಧತೆ ಮತ್ತು ಮುದ್ದುತನದ ಸಂಕೇತ. ಈಗ ವೈರಲ್ ಆಗಿರುವ ಪ್ರಕರಣವೊಂದು ಅದನ್ನು ಸಾಬೀತುಪಡಿಸಿದೆ. ಚರ್ಚ್ ಪಾದ್ರಿಯೊಬ್ಬರು ಪುಟ್ಟ ಮಗುವನ್ನು ಆಶೀರ್ವದಿಸಲು ತನ್ನ ಕೈಯನ್ನು ಮೇಲಕ್ಕೆ ಎತ್ತಿದಾಗ, ಮಗುವೊಂದು ಅದನ್ನು ಹೈ-ಫೈ ಗೆಸ್ಚರ್ ಎಂದು ಭಾವಿಸಿ ತನ್ನ ಮುಗ್ಧತೆಯಿಂದ ಪಾದ್ರಿಗ ಹೈ-ಫೈ ಮಾಡಿರುವ ಕ್ಯೂಟ್ ವಿಡಿಯೋ ಇದಾಗಿದೆ.
ಹಳೆಯ ವಿಡಿಯೋ ಪುನಃ ವೈರಲ್ ಆಗಿದೆ. ತಾಯಿ ಮತ್ತು ಮಗಳು ಆಶೀರ್ವಾದಕ್ಕಾಗಿ ಪಾದ್ರಿಯ ಬಳಿಗೆ ಹೋಗುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು.
ಆಶೀರ್ವದಿಸಲು ಪಾದ್ರಿಯು ತನ್ನ ಕೈಯನ್ನು ಪುಟಾಣಿಯ ಬಳಿ ತೆಗೆದುಕೊಂಡು ಹೋಗುತ್ತಾರೆ. ಮಗು ಮುದ್ದಾಗಿ ಹೈ-ಫೈ ನೀಡುತ್ತಾಳೆ. ಈ ಕ್ಷಣಕ್ಕೆ ಪಾದ್ರಿ ನಗುತ್ತಾರೆ. ನಂತರ, ತಾಯಿಯು ಹುಡುಗಿಯ ಕೈಗಳನ್ನು ಹಿಡಿದಿಟ್ಟುಕೊಳ್ಳುತ್ತಾಳೆ, ಇದರಿಂದ ಅವಳು ಆಚರಣೆಗೆ ಅಡ್ಡಿಯಾಗದಂತೆ ಆಶೀರ್ವಾದವನ್ನು ಪಡೆಯುತ್ತಾಳೆ. ಮಕ್ಕಳ ಮುಗ್ಧತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.
https://twitter.com/ruidiaz_ddhh/status/1318855648348700677?ref_src=twsrc%5Etfw%7Ctwcamp%5Etweetembed%7Ctwterm%5E1318855648348700677%7Ctwgr%5E59d75abd53674e1e994f0ff8d25b839306f649d3%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-little-girl-innocently-gives-hi-fi-to-church-priest-who-was-trying-to-bless-her-old-video-goes-viral-again