ದೊಡ್ಡ ಬೆಕ್ಕುಗಳ ಪೈಕಿ ಭಾರೀ ಬಲವಾದ ಹಲ್ಲುಗಳು ಹಾಗೂ ದವಡೆಳಿಗೆ ಹೆಸರಾದ ಜಾಗ್ವಾರ್ ಗಳು ಮೊಸಳೆಗಳನ್ನೂ ಸಹ ತಮ್ಮ ಬಾಯಿಯಲ್ಲಿ ಕಚ್ಚಿಕೊಂಡು ಓಡಾಡಬಲ್ಲವು !
ಇಂಥದ್ದೇ ಜಾಗ್ವಾರ್ ಒಂದು ನೀರಿನಲ್ಲಿ ಈಜಾಡುತ್ತಿದ್ದ ವೇಳೆ ಸಿಕ್ಕ ಮೊಸಳೆಯೊಂದನ್ನು ಬಾಯಲ್ಲಿ ಕಚ್ಚಿಕೊಂಡು ಪೊದೆಗಳ ಒಳಗೆ ಹೊತ್ತೊಯ್ಯುತ್ತಿರುವ ಹಳೆಯ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ.
“ಓ ದೇವರೇ! ಅದೆಂಥಾ ಶಕ್ತಿಶಾಲಿ ದವಡೆಗಳು!” ಎಂದು ಉದ್ಗಾರದೊಂದಿಗೆ 2019ರ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಮತ್ತೊಮ್ಮೆ ಪೋಸ್ಟ್ ಮಾಡಲಾಗಿದೆ.
ಅಸಲಿಗೆ ಈ ಪ್ರಾಣಿ ಜಾಗ್ವಾರ್ ಆಗಿದ್ದರೂ ಸಹ ಚಿರತೆ ಎಂದು ತಪ್ಪಾಗಿ ಅನೇಕರು ಇಲ್ಲಿ ಭಾವಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ತಮ್ಮ ಮೈಗಳ ಮೇಲಿನ ಚುಕ್ಕೆಗಳು ಹಾಗೂ ಗುರುತುಗಳಲ್ಲಿನ ವೈಶಿಷ್ಟ್ಯತೆಯಿಂದ ಜಾಗ್ವಾರ್, ಚಿರತೆ ಹಾಗೂ ಚೀತಾಗಳ ನಡುವೆ ವ್ಯತ್ಯಾಸ ತಿಳಿಯಬಹುದಾಗಿದೆ.
https://youtu.be/2u2SnLIXlXk