ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಇಂದು ಪಾಟ್ನಾದಲ್ಲಿ ಜೀಪ್ ಓಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 73 ವರ್ಷ ದ ಲಾಲೂ ಅವರು ತಮ್ಮ ಜೀಪ್ ನಲ್ಲಿ ಪುಟ್ಟ ಸವಾರಿ ಮಾಡಿದ್ದಾರೆ.
ಹಲವು ವರ್ಷಗಳ ನಂತರ ತನ್ನ ಮೊದಲ ವಾಹನವನ್ನು ಓಡಿಸಿದ್ದು, ಈ ಜಗತ್ತಿನಲ್ಲಿ ಎಲ್ಲರೂ ಒಂದಲ್ಲ ಒಂದು ರೂಪದಲ್ಲಿ ಚಾಲಕರೇ ಆಗಿದ್ದಾರೆ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಮೂಲಕ ಯಾವಾಗಲೂ ಸಂತೋಷದಿಂದಿರಿ ಎಂದು ಲಾಲೂ ಪ್ರಸಾದ್ ಯಾದವ್ ಅವರು ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಾ ಶೀರ್ಷಿಕೆ ನೀಡಿದ್ದಾರೆ.
BIG NEWS: ಪ್ರಾಥಮಿಕ ಆರೋಗ್ಯ ಸೇವೆ ಸುಧಾರಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ
ಲಾಲೂ ತಮ್ಮ ಜೀಪಿನಲ್ಲಿ ತಿರುಗಾಡುವಾಗ, ಜನರು ಆರ್.ಜೆ.ಡಿ. ಮುಖ್ಯಸ್ಥರ ಫೋಟೋಗಳನ್ನು ತೆಗೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಲಾಲು ಪ್ರಸಾದ್ ಯಾದವ್ ಗೆ ಜಿಂದಾಬಾದ್ ಎಂಬ ಘೋಷಣೆಗಳು ಕೂಡ ಕೇಳಿಬಂದವು.
ಇನ್ನು, ಮಂಗಳವಾರದಂದು ಮೇವು ಹಗರಣದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಯಾದವ್ ಅವರು ಪಾಟ್ನಾದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಈ ಸರ್ಕಾರಿ ಯೋಜನೆಯಲ್ಲಿ ಪ್ರತಿ ದಿನ 2 ರೂ. ಹೂಡಿಕೆ ಮಾಡಿ: ವಾರ್ಷಿಕವಾಗಿ ಪಡೆಯಿರಿ 36000 ರೂ. ಪಿಂಚಣಿ
1996ರ ಅವಧಿಯಲ್ಲಿ ಬೆಳಕಿಗೆ ಬಂದ ಬಹುಕೋಟಿ ಹೈನುಗಾರಿಕೆ ಇಲಾಖೆ ಹಗರಣದಲ್ಲಿ ಅವಿಭಜಿತ ಬಿಹಾರದ ಇಬ್ಬರು ಮುಖ್ಯಮಂತ್ರಿಗಳಾದ ಲಾಲೂ, ಮಿಶ್ರಾ ಹಾಗೂ ಇವರ ಸಂಪುಟದ ಕೆಲ ಸಚಿವರು, ನಾಲ್ವರು ಐಎಎಸ್ ಅಧಿಕಾರಿಗಳು ಹಾಗೂ ಇತರರು ಆಪಾದಿತರು, ರಾಸುಗಳಿಗೆ ಮೇವು ಕೊಳ್ಳಲು ಅಂದಿನ ಅವಿಭಜಿತ ಬಿಹಾರದ ಚೈಬಸಾ ಜಿಲ್ಲೆಯ ಖಜಾನೆಯಿಂದ 37.70 ಕೋಟಿ ರೂ.ಗಳನ್ನು ಹೊರತೆಗೆದು, ದುರುಪಯೋಗ ಮಾಡಿಕೊಂಡರು ಎಂಬುದು ಇವರ ಮೇಲಿರುವ ಆರೋಪವಾಗಿದೆ.
ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿರುವ ಆರ್.ಜೆ.ಡಿ. ನಾಯಕ ತಮ್ಮ ಹಿರಿಯ ಮಗಳು ಮಿಸಾ ಅವರೊಂದಿಗೆ ದೆಹಲಿಯಲ್ಲಿ ತಂಗಿದ್ದಾರೆ. ಮಧುಮೇಹ, ಹೃದಯ ಮತ್ತು ಮೂತ್ರಪಿಂಡದ ತೊಂದರೆಗಳನ್ನು ಒಳಗೊಂಡಂತೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ.