alex Certify ಈ ಸರ್ಕಾರಿ ಯೋಜನೆಯಲ್ಲಿ ಪ್ರತಿ ದಿನ 2 ರೂ. ಹೂಡಿಕೆ ಮಾಡಿ: ವಾರ್ಷಿಕವಾಗಿ ಪಡೆಯಿರಿ 36000 ರೂ. ಪಿಂಚಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸರ್ಕಾರಿ ಯೋಜನೆಯಲ್ಲಿ ಪ್ರತಿ ದಿನ 2 ರೂ. ಹೂಡಿಕೆ ಮಾಡಿ: ವಾರ್ಷಿಕವಾಗಿ ಪಡೆಯಿರಿ 36000 ರೂ. ಪಿಂಚಣಿ

ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ, ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆಯೂ ಒಂದು. ಈ ಯೋಜನೆಯಡಿ ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಜನರು ಹೂಡಿಕೆ ಮಾಡಬಹುದು. ಇವರ ವೃದ್ಧಾಪ್ಯವನ್ನು ಭದ್ರಪಡಿಸಿಕೊಳ್ಳಲು ಈ ಯೋಜನೆ ನೆರವಾಗಲಿದೆ.

ಯೋಜನೆಯಡಿಯಲ್ಲಿ, ಸರ್ಕಾರವು ಕಾರ್ಮಿಕರಿಗೆ ಪಿಂಚಣಿ ನೀಡುತ್ತದೆ. ಈ ಯೋಜನೆಯಲ್ಲಿ ದಿನಕ್ಕೆ ಕೇವಲ 2 ರೂಪಾಯಿಗಳನ್ನು ಉಳಿಸುವ ಮೂಲಕ ವಾರ್ಷಿಕವಾಗಿ 36000 ರೂಪಾಯಿ ಪಿಂಚಣಿ ಪಡೆಯಬಹುದು.

ಈ ಯೋಜನೆಯಲ್ಲಿ ತಿಂಗಳಿಗೆ 55 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಅಂದ್ರೆ ದಿನಕ್ಕೆ 2 ರೂಪಾಯಿಗಿಂತ ಕಡಿಮೆ ಹಣವನ್ನು ನೀವು ಉಳಿಸಿದರೆ ಸಾಕಾಗುತ್ತದೆ. 18 ನೇ ವಯಸ್ಸಿನಲ್ಲಿ ದಿನಕ್ಕೆ ಸುಮಾರು 2 ರೂಪಾಯಿಗಳನ್ನು ಉಳಿಸುವ ಮೂಲಕ ವಾರ್ಷಿಕವಾಗಿ 36000 ರೂಪಾಯಿಗಳ ಪಿಂಚಣಿ ಪಡೆಯಬಹುದು.

40 ವರ್ಷ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ರೆ  ಪ್ರತಿ ತಿಂಗಳು 200 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಬೇರೆ ಬೇರೆ ವಯಸ್ಸಿಗೆ ಠೇವಣಿ ಹಣ ಬೇರೆ ಬೇರೆಯಾಗಿರುತ್ತದೆ. 18 ವರ್ಷ ಮೇಲ್ಪಟ್ಟವರು ಇದ್ರಲ್ಲಿ ಹೂಡಿಕೆ ಮಾಡಬಹುದು. 60 ವರ್ಷಗಳ ನಂತರ ಪಿಂಚಣಿ ಸಿಗುತ್ತದೆ.  60 ವರ್ಷಗಳ ನಂತರ ತಿಂಗಳಿಗೆ 3000 ರೂಪಾಯಿ ಪಿಂಚಣಿ ಸಿಗುತ್ತದೆ.

ಯೋಜನೆಗೆ ಅರ್ಹತೆ :

ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು, ಉಳಿತಾಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.

ವ್ಯಕ್ತಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿರಬಾರದು.

40 ವರ್ಷಕ್ಕಿಂತ ಹೆಚ್ಚಿರಬಾರದು.

ಹೆಸರು ನೋಂದಾಯಿಸುವ ವಿಧಾನ :

ಸಾಮಾನ್ಯ ಸೇವಾ ಕೇಂದ್ರದಲ್ಲಿ ಯೋಜನೆಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಸಿಎಸ್‌ಸಿ ಕೇಂದ್ರದಲ್ಲಿರುವ ಪೋರ್ಟಲ್‌ನಲ್ಲಿ ಕೆಲಸಗಾರರು ಹೆಸರು ನೋಂದಾಯಿಸಿಕೊಳ್ಳಬಹುದು. ಈ ಯೋಜನೆಗಾಗಿ ಸರ್ಕಾರ ವೆಬ್ ಪೋರ್ಟಲ್ ತೆರೆದಿದೆ.

ನೋಂದಣಿಗಾಗಿ, ಆಧಾರ್ ಕಾರ್ಡ್, ಉಳಿತಾಯ ಅಥವಾ ಜನ್ ಧನ್ ಬ್ಯಾಂಕ್ ಖಾತೆಯ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ಇದಲ್ಲದೆ, ಸಮ್ಮತಿ ಪತ್ರವನ್ನು ನೀಡಬೇಕಾಗುತ್ತದೆ. ಅದು ಕೆಲಸಗಾರನು ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆಯಲ್ಲಿ ನೀಡಬೇಕಾಗುತ್ತದೆ, ಬ್ಯಾಂಕ್ ಖಾತೆಯಿಂದ ಪಿಂಚಣಿಗಾಗಿ ಹಣವನ್ನು ಸಕಾಲದಲ್ಲಿ ಕಡಿತಗೊಳಿಸಲು ಇದು ನೆರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...