alex Certify ಕನ್ನಡದ ‌ʼಪುಷ್ಪಾವತಿʼ ಹಾಡಿಗೆ ತಾಂಜಾನಿಯಾ ನರ್ತಕರಿಂದ ಸೂಪರ್​ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡದ ‌ʼಪುಷ್ಪಾವತಿʼ ಹಾಡಿಗೆ ತಾಂಜಾನಿಯಾ ನರ್ತಕರಿಂದ ಸೂಪರ್​ ಡಾನ್ಸ್

ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳು ತುಂಬಿದ್ದು,  ಬಹಳಷ್ಟು ಜನರು ಕನ್ನಡದ ‘ಪುಷ್ಪಾವತಿ’ ಹಾಡಿಗೆ ತಮ್ಮದೇ ಆದ ರೀತಿಯಲ್ಲಿ ನೃತ್ಯ ಮಾಡಲು ಪ್ರಯತ್ನಿಸಿದ್ದಾರೆ.

ತಾಂಜಾನಿಯಾ ಮೂಲದ ಇಂಟರ್​ನೆಟ್​ ಸೆನ್ಸೇಷನ್ ಕಿಲಿ ಪಾಲ್ ಮತ್ತು ಅವರ ಸಹೋದರಿ ನೀಮಾ ಅವರೂ ಕೂಡಾ ಇದನ್ನು ಟ್ರೈ ಮಾಡಿದ್ದಾರೆ. ಅವರು ಕೂಡ ‘ಪುಷ್ಪಾವತಿ’ ಗೆ ನೃತ್ಯದ ಚಲನೆಯನ್ನು ಸಿಂಕ್ ಮಾಡಲು ಪ್ರಯತ್ನಿಸಿದ್ದು, ಇದೀಗ ಸಕತ್​ ವೈರಲ್​ ಆಗಿದೆ.

ಕಿಲಿ ಪಾಲ್ ಇತ್ತೀಚೆಗೆ ಪೋಸ್ಟ್ ಮಾಡಿದ ರೀಲ್‌ನಲ್ಲಿ, ಅವರು ತಮ್ಮ ಸಹೋದರಿ ನೀಮಾ ಅವರೊಂದಿಗೆ ಟ್ರೆಂಡಿಂಗ್ ಹಾಡಿಗೆ ನೃತ್ಯ ಮಾಡುವುದನ್ನು ನಾವು ನೋಡಬಹುದು. ಮೂಲತಃ ಐಶ್ವರ್ಯಾ ರಂಗರಾಜನ್, ವಿ. ಹರಿಕೃಷ್ಣ, ಮತ್ತು ಯೋಗರಾಜ್ ಭಟ್ ಅವರು ಹಾಡಿರುವ ಕನ್ನಡ ಹಾಡಿಗೆ ಸೂಪರ್​ ಆಗಿ ನರ್ತಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ದೃಶ್ಯಗಳು ವೈರಲ್ ಆಗಿವೆ. ಇದಾಗಲೇ ಒಂದು ಲಕ್ಷದಷ್ಟು ಜನರು ಇದನ್ನು ಇಷ್ಟಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...